ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋವಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ‘ದಲ್ದಲ್’ ವೆಬ್ ಸರಣಿಯ ಫಸ್ಟ್ ಲುಕ್ ಸಾರ್ವಜನಿಕವಾಗಿ ಬಿಡುಗಡೆಗೊಂಡಿದೆ. ಭೂಮಿ ಪೆಡ್ನೇಕರ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಈ ಸರಣಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಶೀಘ್ರದಲ್ಲಿಯೇ ಸ್ಟ್ರೀಮಿಂಗ್ ಆಗಲಿದೆ.
ವಿಶ್ವ ಧಮಿಜಾ ಬರೆದ ‘ಭೆಂಡಿ ಬಜಾರ್’ ಕಾದಂಬರಿಯ ಆಧಾರದ ಮೇಲೆ ಈ ಸರಣಿಯ ಕಥಾವಸ್ತು ರೂಪುಗೊಂಡಿದೆ. ಡೈರೆಕ್ಟರ್ ಅಮೃತ್ ರಾಜ್ ಗುಪ್ತ ಈ ಸಂಕೀರ್ಣ ಕಥೆಯನ್ನು ಸರಣಿ ರೂಪದಲ್ಲಿ ಪ್ರಸ್ತುತಪಡಿಸಿದ್ದಾರೆ.
ದಲ್ದಲ್ ಎಂದರೆ ‘ಹೊರಗೆ ಬರಲು ಆಗದ ಪರಿಸ್ಥಿತಿ’ ಎಂಬ ಅರ್ಥವನ್ನು ಹೊಂದಿದ್ದು, ಯಾವುದಾದರೂ ಗಟ್ಟಿ ಪ್ರಯತ್ನ ಮಾಡುವಂತೆ ಕಾಣುವವರೂ ಆ ಸ್ಥಿತಿಯಿಂದ ಮುಕ್ತರಾಗಲು ಸಾಧ್ಯವಿಲ್ಲ ಎಂಬ ಸಂದೇಶವನ್ನೂ ನೀಡುತ್ತದೆ. ಭೂಮಿ ಪೆಡ್ನೇಕರ್ ಇಲ್ಲಿ ಡಿಸಿಪಿ ರೀಟಾ ಫೆರೇರಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಪಾತ್ರದಲ್ಲಿ ಮಾತು ಕಡಿಮೆ ಇದ್ದರೂ, ಹಾವ-ಭಾವ ಮತ್ತು ಎಕ್ಸ್‌ಪ್ರೆಷನ್ ಮೂಲಕ ಭಾವನಾತ್ಮಕತೆಯನ್ನು ಸರಳವಾಗಿ ವ್ಯಕ್ತಪಡಿಸಲಾಗಿದೆ.
ಈ ಸರಣಿ ಶೀಘ್ರದಲ್ಲಿಯೇ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುವುದರಿಂದ, ದೇಶಾದ್ಯಾಂತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಪ್ರೇಕ್ಷಕರ ಗಮನ ಸೆಳೆಯಲಿದೆ.

