ಹೊಸದಿಗಂತ ಡಿಜಿಟಲ್ ಡೆಸ್ಕ್:
ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆಯಾಗುತ್ತಿದ್ದು, ಈ ಬಾರಿ ಬೆಂಗಳೂರಿನಲ್ಲಿ ಶೋಗಳ ಸಂಖ್ಯೆಯಲ್ಲಿ ಸ್ವಲ್ಪ ಕಡಿಮೆಯಾಗಿದೆ. ಇದಕ್ಕೆ ‘ಧುರಂಧರ್ 2’ ಚಿತ್ರದ ಪ್ರೀಮಿಯರ್ ಶೋಗಳೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಸಾಮಾನ್ಯವಾಗಿ ದೊಡ್ಡ ಸಿನಿಮಾಗಳಿಗೆ ಬಿಡುಗಡೆಯ ಮುನ್ನವೇ ಪೇಯ್ಡ್ ಪ್ರೀಮಿಯರ್ಗಳು ನಡೆಯುತ್ತವೆ. ಆದರೆ ಈ ಬಾರಿ ‘ಧುರಂಧರ್ 2’ ಪ್ರದರ್ಶನಗಳ ಹಿನ್ನೆಲೆಯಲ್ಲಿ ‘ಉಸ್ತಾದ್ ಭಗತ್ ಸಿಂಗ್’ಗೆ ಸ್ಪೆಷಲ್ ಶೋಗಳಿಗೆ ಮಾತ್ರ ಅವಕಾಶ ಸಿಕ್ಕಿದೆ. ಮಾರ್ಚ್ 19ರಂದು ಬೆಳಗಿನ ಜಾವ 6:30ರಿಂದಲೇ ವಿಶೇಷ ಪ್ರದರ್ಶನಗಳು ಆರಂಭವಾಗಲಿದ್ದು, ಕೆಲವು ಕಡೆ 7 ಗಂಟೆಗೆ ಶೋಗಳು ನಡೆಯಲಿವೆ.
ಇದನ್ನೂ ಓದಿ:
ಟಿಕೆಟ್ ದರಗಳಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದರೂ, ಪ್ರೇಕ್ಷಕರಿಗೆ ಭಾರವಾಗುವ ಮಟ್ಟದಲ್ಲಿಲ್ಲ. ವಿಶೇಷ ಶೋಗಳಿಗೆ ₹400ರಿಂದ ₹500ರವರೆಗೆ ದರ ನಿಗದಿಯಾಗಿದ್ದು, ಸಾಮಾನ್ಯ ಶೋಗಳಿಗೆ ₹250-₹350ರೊಳಗೆ ಟಿಕೆಟ್ ದೊರೆಯುತ್ತಿದೆ.
ಒಟ್ಟಾರೆ, ಸ್ಕ್ರೀನ್ ಹಾಗೂ ಶೋಗಳ ಸಂಖ್ಯೆಯಲ್ಲಿ ಕಡಿಮೆ ಇದ್ದರೂ, ಚಿತ್ರಕ್ಕೆ ಸಾಮಾನ್ಯ ಮಟ್ಟದ ಪ್ರದರ್ಶನ ದೊರೆತಿದೆ. ನಿರ್ದೇಶಕ ಹರೀಶ್ ಶಂಕರ್ ಈ ಚಿತ್ರದಲ್ಲಿ ‘ವಿಂಟೇಜ್’ ಪವನ್ ಕಲ್ಯಾಣ್ ಅವರನ್ನು ಕಾಣಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.



