ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ‘ಧುರಂಧರ್’ ಚಿತ್ರದ ಸೀಕ್ವೆಲ್ ‘ಧುರಂಧರ್ 2’ ಈಗ ಬಿಡುಗಡೆಗೆ ಸಜ್ಜಾಗಿದೆ. ರಣ್ವೀರ್ ಸಿಂಗ್ ಪ್ರಧಾನ ಭೂಮಿಕೆಯಲ್ಲಿರುವ ಈ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ಅಡ್ವಾನ್ಸ್ ಬುಕಿಂಗ್ ಕೂಡ ಭರ್ಜರಿಯಾಗಿ ಆರಂಭವಾಗಿದೆ. ಆದರೆ, ಬೆಂಗಳೂರಿನ ಸಿನಿಮಾ ಪ್ರಿಯರಿಗೆ ಟಿಕೆಟ್ ಬೆಲೆ ಮಾತ್ರ ಭಾರಿ ಶಾಕ್ ನೀಡಿದೆ.
ಚಿತ್ರವು ಮಾರ್ಚ್ 19ರಂದು ಅಧಿಕೃತವಾಗಿ ತೆರೆಗೆ ಬರುತ್ತಿದ್ದರೂ, ಒಂದು ದಿನ ಮುಂಚಿತವಾಗಿ ಅಂದರೆ ಮಾರ್ಚ್ 18ಕ್ಕೆ ವಿಶೇಷ ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗಿದೆ. ಈ ಶೋಗಳ ಟಿಕೆಟ್ ಬೆಲೆ ಸಾಮಾನ್ಯಕ್ಕಿಂತ 4-5 ಪಟ್ಟು ಹೆಚ್ಚಿದೆ:
ಫೋರಂ ಮಾಲ್‌ನ ಪಿವಿಆರ್ ಡೈರೆಕ್ಟರ್ಸ್ ಕಟ್‌ನಲ್ಲಿ ಒಂದು ಟಿಕೆಟ್‌ಗೆ 2500 ರೂಪಾಯಿ ನಿಗದಿಪಡಿಸಲಾಗಿದೆ.
ಸಿನೆಪೊಲೀಸ್ ಮತ್ತು ಗೋಪಾಲನ್ ಸಿನಿಮಾಸ್‌ಗಳಂತಹ ಕಡೆಗಳಲ್ಲಿ ಕನಿಷ್ಠ 700 ರೂಪಾಯಿಗಳಿಂದ ಆರಂಭವಾಗಿ 1800 ರೂಪಾಯಿವರೆಗೆ ದರಗಳಿವೆ.
ವಿಶೇಷವೆಂದರೆ, ಬಾಲಿವುಡ್‌ನ ಕೇಂದ್ರವಾದ ಮುಂಬೈಗಿಂತಲೂ ಬೆಂಗಳೂರಿನಲ್ಲೇ ಟಿಕೆಟ್ ದರ ಸರಾಸರಿ ಹೆಚ್ಚಿದೆ. ಚಿತ್ರತಂಡ ಸದ್ಯಕ್ಕೆ ಮಾರ್ಚ್ 18ರ ಪ್ರೀಮಿಯರ್ ಶೋಗಳ ಬುಕಿಂಗ್ ಅನ್ನು ಮಾತ್ರ ಓಪನ್ ಮಾಡಿದ್ದು, ಮಾರ್ಚ್ 19ರ ಶೋಗಳ ಬುಕಿಂಗ್ ಅನ್ನು ಬಾಕಿ ಉಳಿಸಿಕೊಳ್ಳುವ ಮೂಲಕ ಪ್ರೀಮಿಯರ್ ಶೋ ಕ್ರೇಜ್ ಅನ್ನು ಲಾಭ ಮಾಡಿಕೊಳ್ಳಲು ಮುಂದಾಗಿದೆ.



