February 3, 2026
Tuesday, February 3, 2026
spot_img

CINE | ಗೋಲ್ಡ್ ಸ್ಮಗ್ಲಿಂಗ್​​ ನ ‘ತಸ್ಕ್‌ರೀ’: ನೆಟ್‌ಫ್ಲಿಕ್ಸ್‌ನಲ್ಲಿ ಬಂದಿದೆ ಹೊಸ ವೆಬ್ ಸೀರಿಸ್! ಮಿಸ್ ಮಾಡ್ದೆ ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ದೇಶಾದ್ಯಂತ ಚರ್ಚೆಗೆ ಗ್ರಾಸವಾದ ಚಿನ್ನ ಕಳ್ಳ ಸಾಗಣೆ ಪ್ರಕರಣಗಳ ನಡುವೆಯೇ, ಅದೇ ವಿಷಯವನ್ನಾಧರಿಸಿದ ವೆಬ್ ಸರಣಿಯೊಂದು ಗಮನ ಸೆಳೆಯುತ್ತಿದೆ. ಇಮ್ರಾನ್ ಹಶ್ಮಿ ನಟನೆಯ ‘ತಸ್ಕ್‌ರೀ: ದಿ ಸ್ಮಗ್ಲರ್ಸ್ ವೆಬ್’ ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನ ಕಾಣುತ್ತಿದ್ದು, ಅಕ್ರಮ ಸಾಗಾಣೆಯ ಒಳಜಗತ್ತನ್ನು ತೆರೆದಿಟ್ಟಿದೆ. ಈ ಸರಣಿ ಹಿಂದಿ ಹಾಗೂ ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಲಭ್ಯವಿದೆ.

ಬೇರೆ ಬೇರೆ ದೇಶಗಳಿಂದ ಚಿನ್ನ, ಡ್ರಗ್ಸ್, ದುಬಾರಿ ವಾಚ್ ಹಾಗೂ ಬ್ಯಾಗ್‌ಗಳನ್ನು ತೆರಿಗೆ ತಪ್ಪಿಸಿ ಭಾರತಕ್ಕೆ ತರಲಾಗುವ ರಹಸ್ಯ ಜಾಲ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದೇ ಕಥೆಯ ಕೇಂದ್ರಬಿಂದು. ಈ ಅಕ್ರಮ ವ್ಯವಸ್ಥೆಯ ಹಿಂದಿನ ತಂತ್ರ, ಲೂಪ್ಹೋಲ್‌ಗಳು ಹಾಗೂ ಅಧಿಕಾರಿಗಳ ಪಾತ್ರವನ್ನು ಸರಣಿ ತೆರೆದಿಡುತ್ತದೆ.

ಇಮ್ರಾನ್ ಹಶ್ಮಿ ಇಲ್ಲಿ ಅರ್ಜುನ್ ಎಂಬ ಪ್ರಾಮಾಣಿಕ ಕಸ್ಟಮ್ಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದಲ್ಲಿ ನಡೆಯುವ ತನಿಖೆ, ಪ್ರಾಮಾಣಿಕ ಹಾಗೂ ಅಪ್ರಾಮಾಣಿಕ ಅಧಿಕಾರಿಗಳ ನಡುವಿನ ಸಂಘರ್ಷದ ಮೂಲಕ ಕಥೆ ಮುಂದುವರಿಯುತ್ತದೆ. ಚಿನ್ನ ಕಳ್ಳ ಸಾಗಣೆ ಜಾಲ ಪತ್ತೆಯಾಗುತ್ತಿದ್ದಂತೆ ಹಲವು ತಿರುವುಗಳು ಎದುರಾಗುತ್ತವೆ.

ಕಥನ ಇನ್ನಷ್ಟು ಗಟ್ಟಿಯಾಗಬಹುದಿತ್ತು ಎಂಬ ಅಭಿಪ್ರಾಯ ಇದ್ದರೂ, ಅಕ್ರಮ ಸಾಗಾಣೆಯ ಪ್ರಕ್ರಿಯೆ ತಿಳಿದುಕೊಳ್ಳಲು ಈ ಸರಣಿ ಉಪಯುಕ್ತವಾಗಿದೆ. ಶರದ್ ಕೆಲ್ಕರ್, ನಂದೀಶ್ ಸಂಧು ಸೇರಿದಂತೆ ಹಲವರು ನಟಿಸಿದ್ದು, ನಿರ್ದೇಶನದ ಹೊಣೆ ನೀರಜ್ ಪಾಂಡೆ ಅವರದ್ದು. ಈ ಸರಣಿ ಐಎಂಡಿಬಿಯಲ್ಲಿ 7.1 ರೇಟಿಂಗ್ ಪಡೆದುಕೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !