ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಅವತಾರ್ 3’ ಸಿನಿಮಾ ಕಳೆದ ಕೆಲವು ವಾರಗಳ ಹಿಂದೆ ಬಿಡುಗಡೆಯಾಗಿ, ಭಾರತೀಯ ಬಾಕ್ಸ್ ಆಫೀಸ್ ಸೇರಿದಂತೆ ವಿಶ್ವಮಟ್ಟದಲ್ಲಿ ಗಮನಸೆಳೆಯುತ್ತಿದೆ. ಚಿತ್ರದ ಕುರಿತಾಗಿ ವಿಮರ್ಶಕರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕೆಲವು ವಿಮರ್ಶಕರು ಇದನ್ನು ಜೇಮ್ಸ್ ಕ್ಯಾಮರನ್ ನಿರ್ದೇಶನದ ಅತ್ಯುತ್ತಮ ಚಿತ್ರಗಳೊಂದಿಗೆ ಹೋಲಿಸಿದಾಗ ಈ ಸಿನಿಮಾ ಸಾಧಾರಣವಾಗಿದೆ ಎಂದು ಹೇಳಿದ್ದಾರೆ. ಆದರೆ ಬಾಕ್ಸ್ ಆಫೀಸ್ ಕಲೆಕ್ಷನ್ ನೋಡಿದರೆ ಸಿನಿಮಾ ಚೆನ್ನಾಗಿಯೇ ಓಡುತ್ತಿದೆ.
ಜೇಮ್ಸ್ ಕ್ಯಾಮರನ್ ಈಗಾಗಲೇ ಬಾಕ್ಸ್ ಆಫೀಸ್ನಲ್ಲಿ ಅಪರೂಪದ ದಾಖಲೆ ಸೃಷ್ಟಿಸುತ್ತಿದ್ದಾರೆ. ಅವರ ನಿರ್ದೇಶನದ ಮೂರು ಚಿತ್ರಗಳು ಒಂದರ ಬಳಿಕ ಒಂದೇ 10000 ಕೋಟಿ ರೂಪಾಯಿ ಮೌಲ್ಯದ ಕಲೆಕ್ಷನ್ ಗಳಿಸಿವೆ. ‘ಅವತಾರ್ 3’ ಈ ಶ್ರೇಣಿಯನ್ನೇ ಮುಂದುವರಿಸುತ್ತಿದ್ದು, ಸತತ ನಾಲ್ಕನೇ ಚಿತ್ರವು 10000 ಕೋಟಿ ರೂಪಾಯಿ ಮೌಲ್ಯದ ದಾಖಲೆ ತಲುಪಲಿದೆ.
‘ಟೈಟಾನಿಕ್’ ಮೊದಲ ಬಾರಿಗೆ 1 ಬಿಲಿಯನ್ ಮೌಲ್ಯದ ಲಾಭ ತಂದುಕೊಟ್ಟಿತು. ನಂತರ 2009 ರಲ್ಲಿ ‘ಅವತಾರ್’ 2.9 ಬಿಲಿಯನ್ ಮೌಲ್ಯದ ಆದಾಯ ಕಂಡಿತು. ‘ಅವತಾರ್ 2’ ಎರಡು ಬಿಲಿಯನ್ ನಷ್ಟೇ ಕಲೆಕ್ಷನ್ ತಲುಪಿತ್ತು. ಈಗ ‘ಅವತಾರ್: ಫೈರ್ ಆಂಡ್ ಆಶ್’ ಬಿಡುಗಡೆ ಆಗಿದ್ದು, 12 ದಿನಗಳಲ್ಲಿ 6800 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಜೇಮ್ಸ್ ಕ್ಯಾಮರನ್ ಸತತ ನಾಲ್ಕು ಚಿತ್ರಗಳಲ್ಲಿ 10000 ಕೋಟಿ ಮೌಲ್ಯದ ಸಾಧನೆ ತಲುಪಿದ ಏಕೈಕ ನಿರ್ದೇಶಕರಾಗುತ್ತಿದ್ದು, ‘ಅವೇಂಜರ್ಸ್’ ಸರಣಿಯ ದಾಖಲೆಗಳನ್ನು ಮೀರಿದ್ದಾರೆ. ಮುಂದಿನ ದಿನಗಳಲ್ಲಿ ‘ಅವತಾರ್ 3’ 10000 ಕೋಟಿ ಕಲೆಕ್ಷನ್ ದಾಟುವ ನಿರೀಕ್ಷೆಯಿದೆ.

