ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ನಂದ ಕಿಶೋರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಬಹು ನಿರೀಕ್ಷಿತ ಮಲಯಾಳಂ ಸಿನಿಮಾ ‘ವೃಷಭ’ ಬಿಡುಗಡೆ ದಿನಾಂಕ ಇದೀಗ ಅಧಿಕೃತವಾಗಿ ಘೋಷಣೆಯಾಗಿದೆ. ಸೂಪರ್ ಸ್ಟಾರ್ ಮೋಹನ್‌ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಪ್ಯಾನ್ ಇಂಡಿಯಾ ಸಿನಿಮಾ ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ವಿಶ್ವಾದ್ಯಂತ ತೆರೆಕಾಣಲಿದೆ.
ಮೋಹನ್‌ಲಾಲ್ ಅವರ ಭರ್ಜರಿ ಅಭಿನಯದ ಜೊತೆಗೆ, ಈ ಚಿತ್ರದಲ್ಲಿ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮೋಹನ್‌ಲಾಲ್ ಅವರ ಮಗನ ಪಾತ್ರವನ್ನು ನಿರ್ವಹಿಸಿದ್ದಾರೆ. ರಾಗಿಣಿ ದ್ವಿವೇದಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಯನ್ ಸಾರಿಕಾ, ಅಜಯ್ ಹಾಗೂ ನೇಹಾ ಸಕ್ಸೇನಾ ಮೊದಲಾದವರು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
‘ವೃಷಭ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ ಸಿಎಸ್, ಸೌಂಡ್ ಡಿಸೈನ್‌ನ ಹೊಣೆ ಹೊತ್ತಿದ್ದಾರೆ ಆಸ್ಕರ್ ಪ್ರಶಸ್ತಿ ವಿಜೇತ ರಸುಲ್ ಪೂಕುಟ್ಟಿ. ಸಂಭಾಷಣೆಗಳನ್ನು ಜನಾರ್ಧನ್ ಮಹರ್ಷಿ ಮತ್ತು ಕಾರ್ತಿಕ್ ಬರೆದಿದ್ದು, ಸಾಹಸ ದೃಶ್ಯಗಳಿಗೆ ಪೀಟರ್ ಹೈನ್, ಸ್ಟಂಟ್ ಸಿಲ್ವಾ ಹಾಗೂ ನಿಖಿಲ್ ಮಾರ್ಗದರ್ಶನ ನೀಡಿದ್ದಾರೆ. ಈ ಶ್ರೇಷ್ಠ ತಂತ್ರಜ್ಞರ ತಂಡದ ಕಾರಣದಿಂದ ಸಿನಿಮಾ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದೆ.
ಇದರಲ್ಲಿ ವಿಶೇಷ ಅಂದ್ರೆ, ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ (Mark) ಚಿತ್ರವೂ ಕ್ರಿಸ್‌ಮಸ್‌ಗೆ ಬಿಡುಗಡೆಯಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪೈಪೋಟಿ ನಿಶ್ಚಿತವಾಗಿದೆ.

