ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಲೋಕನಾಯಕ ಕಮಲ್ ಹಾಸನ್ ಅವರು 46 ವರ್ಷಗಳ ಬಳಿಕ ಒಟ್ಟಿಗೆ ಅಭಿನಯಿಸಲು ಹೊರಟಿರುವ ಸುದ್ದಿ ಅಭಿಮಾನಿಗಳ ಮಧ್ಯೆ ಚರ್ಚೆಗೆ ಕಾರಣವಾಗಿದೆ. ಈ ಪ್ರಾಜೆಕ್ಟ್ ಬಗ್ಗೆ ಕಮಲ್ ಹಾಸನ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ಸೈಮಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಾವು ದೀರ್ಘಕಾಲದಿಂದ ಒಟ್ಟಿಗೆ ಕೆಲಸ ಮಾಡಲು ಬಯಸುತ್ತಿದ್ದೇವೆ. ಶೀಘ್ರದಲ್ಲೇ ನಿಮ್ಮ ಮುಂದೆ ಒಟ್ಟಿಗೆ ಬರಲಿದ್ದೇವೆ. ಅದು ನಿಮ್ಮನ್ನು ಸರ್ಪ್ರೈಸ್ ಮಾಡುತ್ತದೆ” ಎಂದು ಹೇಳಿದ್ದರು.
ಆದರೆ, ಈ ಇಬ್ಬರ ಕಾಂಬಿನೇಶನ್ ಸಿನಿಮಾದ ನಿರ್ದೇಶಕನ ಕುರಿತು ಕುತೂಹಲವೂ ಮೂಡಿಸಿದೆ. ಆರಂಭದಲ್ಲಿ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಬಹುದು ಎಂಬ ಸುದ್ದಿ ಇತ್ತಾದರೂ ನಂತರ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಅವರು ಪ್ರಾಜೆಕ್ಟ್‌ನಿಂದ ಹೊರಬಂದಿದ್ದಾರೆ ಎಂಬ ವರದಿಗಳು ವೈರಲ್ ಆಗಿವೆ. ಇದೀಗ ನೆಲ್ಸನ್ ದಿಲೀಪ್ ಕುಮಾರ್ ಅವರ ಹೆಸರು ಮುನ್ನೆಲೆಗೆ ಬಂದಿದೆ. ಸದ್ಯ ಈ ಸಿನಿಮಾ ಅವರ ಮಾರ್ಗದರ್ಶನದಲ್ಲಿ ತಯಾರಾಗಬಹುದು ಎಂಬ ಅನುಮಾನ ಕಾಲಿವುಡ್‌ನಲ್ಲಿ ವ್ಯಕ್ತವಾಗಿದೆ.

