April 2, 2026
Thursday, April 2, 2026
spot_img

CINE | ಹನುಮ ಜಯಂತಿಗೆ ‘ಪೆದ್ದಿ’ ಪೋಸ್ಟರ್ ಧಮಾಕಾ: ರಾಮ್ ಚರಣ್ ಮಾಸ್ ಲುಕ್‌ಗೆ ಫ್ಯಾನ್ಸ್ ಫಿದಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಾಲಿವುಡ್ ಅಂಗಳದ ಅತ್ಯಂತ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ಪೆದ್ದಿ’ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸುತ್ತಿದೆ. ಇತ್ತೀಚೆಗೆ ಚಿತ್ರದ ಬಿಡುಗಡೆ ತಡವಾಗಬಹುದು ಎಂಬ ಗಾಳಿಸುದ್ದಿಗಳು ಹರಿದಾಡುತ್ತಿದ್ದು, ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿತ್ತು. ಆದರೆ, ಚಿತ್ರತಂಡ ಹನುಮ ಜಯಂತಿಯ ಶುಭ ಸಂದರ್ಭದಲ್ಲಿ ಹೊಚ್ಚ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ.

ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ರಾಮ್ ಚರಣ್ ಅವರ ಲುಕ್ ಕಣ್ಣು ಕುಕ್ಕುವಂತಿದೆ. ‘ಪೆದ್ದಿ ಪೈಲ್ವಾನ್’ ಗ್ಲಿಂಪ್ಸ್‌ನಿಂದ ಸ್ಫೂರ್ತಿ ಪಡೆದ ಈ ಪೋಸ್ಟರ್‌ನಲ್ಲಿ ಚರಣ್ ಅತ್ಯಂತ ಪವರ್‌ಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಬಲಿಷ್ಠ ಮೈಕಟ್ಟು ಮತ್ತು ತೀಕ್ಷ್ಣವಾದ ನೋಟವು ಹನುಮಂತನ ಶಕ್ತಿ ಮತ್ತು ಧೈರ್ಯವನ್ನು ಪ್ರತಿಬಿಂಬಿಸುವಂತಿದೆ. ಈ ಪೋಸ್ಟರ್ ನೋಡಿ ಫ್ಯಾನ್ಸ್ “ಇದು ಪಕ್ಕಾ ಮಾಸ್ ಸಿನಿಮಾ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸುತ್ತಿದ್ದಾರೆ.

ಆದರೆ, ಈ ಪೋಸ್ಟರ್‌ನಲ್ಲಿ ಸಿನಿಮಾದ ಬಿಡುಗಡೆಯ ದಿನಾಂಕದ ಬಗ್ಗೆ ಯಾವುದೇ ಉಲ್ಲೇಖವಿಲ್ಲದಿರುವುದು ಅಭಿಮಾನಿಗಳಲ್ಲಿ ಮತ್ತೆ ಗೊಂದಲ ಮೂಡಿಸಿದೆ. ಸಿನಿಮಾ ಮುಂದೂಡಿಕೆಯಾಗಬಹುದು ಎಂಬ ಮಾತುಗಳ ನಡುವೆ, ರಾಮ್ ಚರಣ್ ಅವರು ಈ ಹಿಂದೆ ಸಿನಿಮಾ ನಿಗದಿಯಾದಂತೆ ಏಪ್ರಿಲ್ 30ರಂದೇ ಬಿಡುಗಡೆಯಾಗಲಿದೆ ಎಂದು ಸುಳಿವು ನೀಡಿದ್ದರು. ಹಾಗಿದ್ದರೂ, ಚಿತ್ರತಂಡದಿಂದ ಅಧಿಕೃತ ಮುದ್ರೆ ಬೀಳಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ನಿರ್ದೇಶಕ ಬುಚ್ಚಿ ಬಾಬು ಸಾನಾ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರವು ಗ್ರಾಮೀಣ ಸೊಗಡಿನ ಕ್ರೀಡಾ ಕಥಾಹಂದರವನ್ನು ಹೊಂದಿದೆ. ಈ ಸಿನಿಮಾದ ಮತ್ತೊಂದು ದೊಡ್ಡ ಆಕರ್ಷಣೆಯೆಂದರೆ ಕರುನಾಡ ಚಕ್ರವರ್ತಿ ‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಅವರು ಇಲ್ಲಿ ಅತ್ಯಂತ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು.

ಒಟ್ಟಾರೆಯಾಗಿ, ‘ಪೆದ್ದಿ’ ಚಿತ್ರವು ತನ್ನ ಪೋಸ್ಟರ್ ಮೂಲಕ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ್ದು, ತೆರೆಯ ಮೇಲೆ ಚರಣ್ ಮತ್ತು ಶಿವಣ್ಣನ ಆರ್ಭಟ ನೋಡಲು ಸಿನಿಪ್ರೇಮಿಗಳು ಕಾತರರಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !