ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದಿದ್ದರೂ, ಒಟಿಟಿ ಮೂಲಕ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಪಾಕಿಸ್ತಾನದ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾವನ್ನು ವೀಕ್ಷಿಸಿದ ಪಾಕ್ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಮೇಕಿಂಗ್ ಬಗ್ಗೆ ಭಾರಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಈ ಸಿನಿಮಾದ ಪೂರ್ತಿ ಕಥೆ ಪಾಕಿಸ್ತಾನದ ಲಿಯಾರಿ ಎಂಬ ಪಟ್ಟಣದಲ್ಲಿ ನಡೆಯುತ್ತದೆ. 2000ನೇ ಇಸವಿಯ ಕಾಲಘಟ್ಟದ ಪಾಕಿಸ್ತಾನವನ್ನು ನಿರ್ದೇಶಕ ಆದಿತ್ಯ ಧಾರ್ ಎಷ್ಟು ಅದ್ಭುತವಾಗಿ ತೆರೆಯ ಮೇಲೆ ತಂದಿದ್ದಾರೆ ಎಂದರೆ, ಅಲ್ಲಿನ ಮಂದಿಯೇ ಅಚ್ಚರಿ ಪಟ್ಟಿದ್ದಾರೆ. ಉರ್ದು ಪೋಸ್ಟರ್‌ಗಳು, ಸೂಚನಾ ಫಲಕಗಳು ಮತ್ತು ಅಲ್ಲಿನ ಪರಿಸರವನ್ನು ಅತ್ಯಂತ ನಿಖರವಾಗಿ ಸೃಷ್ಟಿಸಿದ ಕಲಾ ನಿರ್ದೇಶನದ ತಂಡಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. “ನಮಗೆ ಆ ಕಾಲಕ್ಕೆ ಮರಳಿ ಹೋದ ಅನುಭವವಾಯಿತು” ಎಂದು ಪಾಕ್ ಪ್ರೇಕ್ಷಕರು ತಮ್ಮ ವಿಮರ್ಶೆಗಳಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
ಗ್ಯಾಂಗ್‌ಸ್ಟರ್ ರೆಹಮಾನ್ ಡಕಾಯಿತ್ ಪಾತ್ರದಲ್ಲಿ ಅಕ್ಷಯ್ ಖನ್ನಾ ಅದ್ಭುತವಾಗಿ ನಟಿಸಿದ್ದಾರೆ. ಸಂಜಯ್ ದತ್, ಅರ್ಜುನ್ ರಾಮ್‌ಪಾಲ್ ಮತ್ತು ಸಾರಾ ಅರ್ಜುನ್ ಅವರ ಪರ್ಫಾರ್ಮೆನ್ಸ್ ಸಿನಿಮಾಗೆ ತೂಕ ತಂದಿದೆ.
ಹಲವು ದೇಶಗಳಲ್ಲಿ ನಿಷೇಧಕ್ಕೊಳಗಾಗಿದ್ದ ಈ ಸಿನಿಮಾ ಪಾಕ್ ವಿರೋಧಿ ಧೋರಣೆ ಹೊಂದಿಲ್ಲ ಎಂಬುದು ಅಲ್ಲಿನ ಪ್ರೇಕ್ಷಕರ ಅಭಿಪ್ರಾಯ. ನೈಜ ಕಥೆ ಮತ್ತು ತಾಂತ್ರಿಕ ಶ್ರೀಮಂತಿಕೆಯಿಂದಾಗಿ ಈ ಚಿತ್ರ ಈಗಾಗಲೇ ಸಾವಿರಾರು ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿದೆ.



