ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾರ್ಚ್ 19ರಂದು ಭಾರತೀಯ ಚಿತ್ರರಂಗದ ಈ ವರ್ಷದ ಬಹುದೊಡ್ಡ ಸಂಘರ್ಷಕ್ಕೆ ವೇದಿಕೆ ಸಿದ್ಧವಾಗಿದೆ. ಸ್ಯಾಂಡಲ್‌ವುಡ್‌ನ ಯಶ್ ನಟನೆಯ ‘ಟಾಕ್ಸಿಕ್’ ಹಾಗೂ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಅಂದು ಮುಖಾಮುಖಿಯಾಗಲಿವೆ. ಭಾರತದಲ್ಲಿ ಇನ್ನೂ ಬುಕಿಂಗ್ ಪ್ರಕ್ರಿಯೆ ಆರಂಭವಾಗದಿದ್ದರೂ, ಅಮೆರಿಕದಲ್ಲಿ ಈಗಾಗಲೇ ಟಿಕೆಟ್ ಸಮರ ಶುರುವಾಗಿದೆ.
ಸದ್ಯದ ವರದಿಗಳ ಪ್ರಕಾರ, ಅಮೆರಿಕದಲ್ಲಿ ‘ಟಾಕ್ಸಿಕ್’ ಚಿತ್ರಕ್ಕಿಂತ ‘ಧುರಂಧರ್ 2’ ಮುನ್ನಡೆ ಸಾಧಿಸಿ ಅಚ್ಚರಿ ಮೂಡಿಸಿದೆ.
ಧುರಂಧರ್ 2: ಮೊದಲ ಭಾಗವು ಬ್ಲಾಕ್‌ಬಸ್ಟರ್ ಆಗಿದ್ದರಿಂದ, ಸೀಕ್ವೆಲ್ ಮೇಲೆ ವಿದೇಶಿ ಪ್ರೇಕ್ಷಕರಲ್ಲಿ ಭಾರೀ ಕುತೂಹಲವಿದೆ. ಇದು ಬುಕಿಂಗ್‌ನಲ್ಲಿ ಪ್ರತಿಫಲಿಸುತ್ತಿದೆ.
ಟಾಕ್ಸಿಕ್: ‘ಕೆಜಿಎಫ್ 2’ ನಂತರ ಯಶ್ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರವಿದು. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ.
ಸಿನಿಮಾ ಬಿಡುಗಡೆಗೆ ಇನ್ನೂ 17 ದಿನಗಳು ಬಾಕಿ ಇವೆ. ಟ್ರೇಲರ್ ಮತ್ತು ಪ್ರಮೋಷನ್ ವೇಗ ಪಡೆದುಕೊಂಡಂತೆ ಚಿತ್ರದ ಅಂಕಿಅಂಶಗಳು ಅದಲುಬದಲಾಗುವ ಸಾಧ್ಯತೆ ದಟ್ಟವಾಗಿದೆ. ಸದ್ಯಕ್ಕೆ ರಣವೀರ್ ಸಿಂಗ್ ಮುನ್ನಡೆಯಲ್ಲಿದ್ದರೂ, ಯಶ್ ಅವರ ಜಾಗತಿಕ ಕ್ರೇಜ್ ಕಡೆಗಣಿಸುವಂತಿಲ್ಲ. ಮುಂಬರುವ ದಿನಗಳಲ್ಲಿ ‘ಟಾಕ್ಸಿಕ್’ ಸುನಾಮಿ ಎಬ್ಬಿಸಿದರೂ ಅಚ್ಚರಿಯಿಲ್ಲ!



