March 6, 2026
Friday, March 6, 2026
spot_img

CINE | ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಟ್ರೇಲರ್ ರಿಲೀಸ್: ಮತ್ತೆ ಖಾಕಿ ಅವತಾರದಲ್ಲಿ ವಿಜಯ್ ರಾಘವೇಂದ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಜಯ್ ರಾಘವೇಂದ್ರ ನಟನೆಯ ‘ಸೀತಾರಾಮ್ ಬಿಣೋಯ್ ಕೇಸ್ ನಂಬರ್ 18’ ಚಿತ್ರದ ಯಶಸ್ಸಿನ ಬಳಿಕ ಇದೀಗ ಅದರ ಮುಂದುವರಿದ ಭಾಗ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಬಿಡುಗಡೆಯಿಗೆ ಸಜ್ಜಾಗಿದೆ.

ಫೆಬ್ರವರಿ 20ರಂದು ತೆರೆಗೆ ಬರಲಿರುವ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಗೊಂಡಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ:

ಟ್ರೇಲರ್‌ನಲ್ಲಿ ವಿಜಯ್ ರಾಘವೇಂದ್ರ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದು, ಒಂದೇ ವಾರದಲ್ಲಿ ಸಂಭವಿಸುವ ಎರಡು ಕೊಲೆ ಪ್ರಕರಣಗಳನ್ನು ತನಿಖೆ ಮಾಡುವ ಕಥಾಹಂದರದ ಸುಳಿವು ನೀಡಲಾಗಿದೆ. ಮುಂದಿನ ಕೊಲೆ ತಡೆಯುವುದು ಮತ್ತು ಆರೋಪಿಯನ್ನು ಪತ್ತೆಹಚ್ಚುವುದು ಕಥಾನಾಯಕನ ಪ್ರಮುಖ ಗುರಿಯಾಗಿದೆ.

ಚಿತ್ರದಲ್ಲಿ ವಿಜಯ್ ರಾಘವೇಂದ್ರ ಜೊತೆ ಗೋಪಾಲ್ ಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪವನ್ ಒಡೆಯರ್ ಪ್ರಸ್ತುತಪಡಿಸಿರುವ ಈ ಸಿನಿಮಾವನ್ನು ದೇವಿ ಪ್ರಸಾದ್ ಶೆಟ್ಟಿ ನಿರ್ದೇಶಿಸಿದ್ದು, ‘ಫ್ಲೈಯಿಂಗ್ ಎಲಿಫೆಂಟ್ ಸ್ಟೋರಿ ಟೆಲ್ಲರ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !