April 4, 2026
Saturday, April 4, 2026
spot_img

CINE | ಮದುವೆ ಬೆನ್ನಲ್ಲೇ ಫ್ಯಾನ್ಸ್​​ಗೆ ಸರ್​​ಪ್ರೈಸ್: ರಶ್ಮಿಕಾ–ವಿಜಯ್ ಜೋಡಿಯ ‘ರಣಬಾಲಿ’ ಪೋಸ್ಟರ್ ಔಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅವರ ವಿವಾಹ ಸಂಭ್ರಮದ ಚರ್ಚೆ ಇನ್ನೂ ಬಿಸಿಯಾಗಿರುವಾಗಲೇ ಅಭಿಮಾನಿಗಳಿಗೆ ಮತ್ತೊಂದು ಸರ್‌ಪ್ರೈಸ್ ಸಿಕ್ಕಿದೆ.

ಇವರ ಮುಂದಿನ ಸಿನಿಮಾ ‘ರಣಬಾಲಿ’ಯ ಮೊದಲ ಪೋಸ್ಟರ್ ಹಾಡಿನ ಮೂಲಕ ಅನಾವರಣಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಇದನ್ನೂ ಓದಿ:

ಈ ಜೋಡಿ ಮೊದಲು ಗೀತ ಗೋವಿಂದಂ ಚಿತ್ರದ ವೇಳೆ ಪರಿಚಯವಾಗಿತ್ತು. ನಂತರ ಡಿಯರ್ ಕಾಮ್ರೇಡ್ ಸಿನಿಮಾದಲ್ಲೂ ಜೊತೆಯಾಗಿ ನಟಿಸಿದ್ದರು. ಈಗ ದಾಂಪತ್ಯ ಜೀವನ ಆರಂಭಿಸಿದ ನಂತರ ಮತ್ತೆ ತೆರೆ ಮೇಲೆ ಒಂದಾಗುತ್ತಿರುವುದು ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

‘ರಣಬಾಲಿ’ಯಲ್ಲಿ ವಿಜಯ್ ರಣಬಾಲಿ ಪಾತ್ರದಲ್ಲಿ, ರಶ್ಮಿಕಾ ಜಯಮ್ಮ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡಿ-ಗ್ಲಾಮರ್ ಲುಕ್‌ನಲ್ಲಿ ಇಬ್ಬರೂ ವಿಭಿನ್ನವಾಗಿ ಮೆರೆದಿದ್ದಾರೆ. ಚಿತ್ರವನ್ನು ರಾಹುಲ್ ಸಂಕ್ರಿತ್ಯನ್ ನಿರ್ದೇಶಿಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !