March 31, 2026
Tuesday, March 31, 2026
spot_img

CINE | ‘ತಬಾಹಿ’ ಹಾಡು ಸೂಪರ್, ವಿಡಿಯೋ ಎಲ್ಲಿ? ಪ್ರಶ್ನೆ ಮಾಡುತ್ತಿದ್ದಾರೆ ರಾಕಿ ಭಾಯ್ ಫ್ಯಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಕಿಂಗ್ ಸ್ಟಾರ್ ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್ ದಾಸ್ ಕಾಂಬಿನೇಷನ್‌ನ ‘ಟಾಕ್ಸಿಕ್’ ಸಿನಿಮಾ ಸದ್ಯ ಸ್ಯಾಂಡಲ್‌ವುಡ್‌ನ ಅತಿ ದೊಡ್ಡ ಹೈಪ್ ಇರುವ ಚಿತ್ರ. ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಇಂದು ಚಿತ್ರದ ಮೊದಲ ಸಿಂಗಲ್ ‘ತಬಾಹಿ’ ಬಿಡುಗಡೆಯಾಗಿದೆ. ಆದರೆ, ಈ ಹಾಡು ಅಭಿಮಾನಿಗಳ ಪಾಲಿಗೆ ಸಣ್ಣದೊಂದು ಆಘಾತವನ್ನೇ ನೀಡಿದೆ.

ವಿಶಾಲ್ ಮಿಶ್ರಾ ಸಂಗೀತ ನೀಡಿರುವ ಈ ಹಾಡಿನಲ್ಲಿ ಯಶ್ ಮತ್ತು ಕಿಯಾರಾ ಅಡ್ವಾಣಿ ಅವರ ಅದ್ಭುತ ಕೆಮಿಸ್ಟ್ರಿ ಇರಲಿದೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದರು. ಆದರೆ ‘ಜೀ ಮ್ಯೂಸಿಕ್’ ಮೂಲಕ ಹೊರಬಂದ ಈ ಹಾಡು ಕೇವಲ ಆಡಿಯೋ ರೂಪದಲ್ಲಿದೆ. ಹಾಡಿನ ಲಿರಿಕಲ್ ವಿಡಿಯೋ ಅಥವಾ ದೃಶ್ಯಗಳು ಇಲ್ಲದಿರುವುದು ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ.

ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳು ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. “ವಿಡಿಯೋ ಇಲ್ಲದ ಮೇಲೆ ಇಷ್ಟೊಂದು ಹೈಪ್ ನೀಡುವ ಅವಶ್ಯಕತೆ ಏನಿತ್ತು? ಕೇವಲ ಆಡಿಯೋ ಟ್ರ್ಯಾಕ್ ಎಂದು ಮೊದಲೇ ತಿಳಿಸಬೇಕಿತ್ತು” ಎಂಬ ಕಮೆಂಟ್‌ಗಳು ಹರಿದುಬರುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !