Wednesday, January 7, 2026

CINE | ಮತ್ತೆ ಪ್ರತಿಧ್ವನಿಸಿದ ‘ಸಂದೇಶೇ ಆತೇ ಹೈ’ ಹಾಡು: ಬಾರ್ಡರ್–2 ಸಾಂಗ್ ಗೆ ದಾಖಲೆ ಮಟ್ಟದ ಪ್ರತಿಕ್ರಿಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶಭಕ್ತಿಯ ಭಾವನೆಗೆ ಧ್ವನಿಯಾದ ‘ಸಂದೇಶೇ ಆತೇ ಹೈ’ ಹಾಡು ಮತ್ತೆ ಪ್ರೇಕ್ಷಕರ ಹೃದಯ ಗೆದ್ದಿದೆ. ಬಾರ್ಡರ್–2 ಚಿತ್ರಕ್ಕಾಗಿ ಈ ಐಕಾನಿಕ್ ಗೀತೆಯನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡಲಾಗಿದ್ದು, ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ.

ಸಂಗೀತ ನಿರ್ದೇಶಕ ಮಿಥೂನ್ ಶರ್ಮಾ ಈ ಹಾಡನ್ನು ಹೊಸ ತಂತ್ರಜ್ಞಾನದ ಸ್ಪರ್ಶದೊಂದಿಗೆ ಮರುಸೃಷ್ಟಿ ಮಾಡಿದ್ದಾರೆ. ಸೋನು ನಿಗಮ್, ಅರಿಜಿತ್ ಸಿಂಗ್ ಮತ್ತು ರೂಪ್ ಕುಮಾರ್ ರಾಥೋಡ್ ಅವರ ಧ್ವನಿಯಲ್ಲಿ ಮೂಡಿಬಂದ ಈ ಗೀತೆ ಬಿಡುಗಡೆಯಾದ ಅರ್ಧ ಗಂಟೆಯಲ್ಲೇ 10 ಲಕ್ಷ ವೀಕ್ಷಣೆಗಳನ್ನು ಪಡೆದು ಹೊಸ ದಾಖಲೆ ಬರೆದಿದೆ. ಯೂಟ್ಯೂಬ್‌ನಲ್ಲಿ ಈಗಾಗಲೇ ಮಿಲಿಯನ್‌ಗಟ್ಟಲೆ ವೀಕ್ಷಣೆಗಳು ಲಭಿಸುತ್ತಿವೆ.

ಬಾರ್ಡರ್–2 ಚಿತ್ರದಲ್ಲಿ ಈ ಬಾರಿ ಯುವ ಕಲಾವಿದರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅಹಾನ್ ಶೆಟ್ಟಿ ಭಾರತೀಯ ನೌಕಾಸೇನಾ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ವರುಣ್ ಧವನ್ ಸೇನಾ ಅಧಿಕಾರಿ ಮೇಜರ್ ಹೋಶ್ಯಾರ್ ಸಿಂಗ್ ದಹಿಯಾ ಪಾತ್ರ ನಿರ್ವಹಿಸಿದ್ದಾರೆ. ದಿಲ್ಜಿತ್ ದೋಸಾಂಜ್ ಭಾರತೀಯ ವಾಯುಸೇನಾ ಅಧಿಕಾರಿಯಾಗಿ ನಟಿಸಿದ್ದಾರೆ.

ಇದನ್ನೂ ಓದಿ: Snacks Series 5 | ಮನೆಯಲ್ಲೇ ಹೋಟೆಲ್ ಸ್ಟೈಲ್ ಸ್ನಾಕ್ಸ್ ಸವಿಬೇಕಾ? ಹಾಗಿದ್ರೆ ಕ್ರಿಸ್ಪಿ ಪನೀರ್ ನಗೆಟ್ಸ್ ಟ್ರೈ ಮಾಡಿ

ಮೊದಲ ಬಾರ್ಡರ್ ಚಿತ್ರದಲ್ಲಿ ಫತೇ ಸಿಂಗ್ ಕಲೆರ್ ಪಾತ್ರದಲ್ಲಿ ಗಮನ ಸೆಳೆದಿದ್ದ ಸನ್ನಿ ಡಿಯೋಲ್, 69ನೇ ವಯಸ್ಸಿನಲ್ಲೂ ಬಾರ್ಡರ್–2ನಲ್ಲಿ ಶಕ್ತಿಶಾಲಿ ಪಾತ್ರದೊಂದಿಗೆ ಮಿಂಚಿದ್ದಾರೆ. ಯೋಧರ ಸ್ಮರಣೆ ಮತ್ತು ಭಾವನಾತ್ಮಕ ಅಂಶಗಳು ಈ ಹಾಡಿನ ಮೂಲಕ ಮತ್ತೆ ಜೀವಂತವಾಗಿವೆ. ಜನವರಿ 23ರಂದು ಬಾರ್ಡರ್–2 ತೆರೆಗೆ ಬರಲಿದ್ದು, ಈಗಾಗಲೇ ಹಾಡಿನ ಮೂಲಕ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ.

error: Content is protected !!