ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಟೀಸರ್ ಫೆಬ್ರವರಿ 20ರಂದು ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್‌ನಲ್ಲಿ ಭಾರೀ ವೀಕ್ಷಣೆ ಪಡೆದುಕೊಂಡಿದೆ. ನಿರ್ಮಾಣ ಸಂಸ್ಥೆ ಕೆವಿಎನ್ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ ಟೀಸರ್ ಐದು ಭಾಷೆಗಳಲ್ಲಿ ಲಭ್ಯವಿದ್ದು, ಪ್ರತಿ ಭಾಷೆಯಲ್ಲೂ ವಿಭಿನ್ನ ಮಟ್ಟದ ಪ್ರತಿಕ್ರಿಯೆ ಸಿಕ್ಕಿದೆ.
ಕನ್ನಡ ಆವೃತ್ತಿಗೆ ಮೊದಲ ದಿನವೇ ಮಿಲಿಯನ್ ಗಟ್ಟಲೆ ವೀಕ್ಷಣೆ ಲಭ್ಯವಾಗಿದ್ದು, ಯೂಟ್ಯೂಬ್ ಲೆಕ್ಕಾಚಾರ ಪ್ರಕಾರ ಸುಮಾರು 3.6 ಮಿಲಿಯನ್ ದಾಟಿದೆ ಎಂಬ ಮಾಹಿತಿ ಇದೆ. ಹಿಂದಿ ಆವೃತ್ತಿ ಹೆಚ್ಚು ಸದ್ದು ಮಾಡಿದ್ದು, ಸುಮಾರು 14 ಮಿಲಿಯನ್ ವೀಕ್ಷಣೆ ಗಳಿಸಿದೆ ಎನ್ನಲಾಗಿದೆ. ತೆಲುಗು ಟೀಸರ್‌ಗೆ 2.9 ಮಿಲಿಯನ್ ಹಾಗೂ ತಮಿಳು ಆವೃತ್ತಿಗೆ 2.1 ಮಿಲಿಯನ್ ವೀಕ್ಷಣೆ ಸಿಕ್ಕಿದೆ. ಮಲಯಾಳಂ ಭಾಷೆಯಲ್ಲೂ ಲಕ್ಷಾಂತರ ವೀಕ್ಷಣೆ ದಾಖಲಾಗಿದೆ.
ಇದನ್ನೂ ಓದಿ:
ಭಾಷೆ ಪ್ರಕಾರ ಪ್ರೇಕ್ಷಕರ ರುಚಿ ಬದಲಾಗುವ ಕಾರಣ ವೀಕ್ಷಣೆ ಸಂಖ್ಯೆಯಲ್ಲೂ ವ್ಯತ್ಯಾಸ ಕಾಣುತ್ತಿದೆ. ಟೀಸರ್‌ನಲ್ಲಿ ಗಾಢ ಮತ್ತು ರಕ್ತಸಿಕ್ತ ದೃಶ್ಯಾವಳಿಗಳು, ತಂದೆ–ಮಗನ ಕಥಾ ಸುಳಿವು, ವಿಭಿನ್ನ ಲುಕ್‌ಗಳ ಮೂಲಕ ಯಶ್ ಗಮನ ಸೆಳೆದಿದ್ದಾರೆ.
ಟೀಸರ್ ಸೃಷ್ಟಿಸಿರುವ ಹಂಗಾಮದ ನಡುವೆ, ಚಿತ್ರದ ಬಿಡುಗಡೆಯ ದಿನ ಯಾವ ಮಟ್ಟದ ದಾಖಲೆ ಸೃಷ್ಟಿಯಾಗಲಿದೆ ಎಂಬ ಕುತೂಹಲ ಹೆಚ್ಚಿದೆ.



