ಬೆಳಗ್ಗೆ ಒಂದು ಕಪ್ ಬಿಸಿ ನೀರಿನಿಂದ ದಿನ ಶುರು ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಮಾತು ಎಲ್ಲರಿಗೂ ಗೊತ್ತು. ಆದರೆ ಅದಕ್ಕೆ ದಾಲ್ಚಿನ್ನಿ ಅಥವಾ ಶುಂಠಿ ಸೇರಿಸಿದರೆ ದೇಹಕ್ಕೆ ಎಷ್ಟು ಲಾಭ ನೀಡುತ್ತೆ ಗೊತ್ತಾ? ಇವೆರಡೂ ನೈಸರ್ಗಿಕ ಪದಾರ್ಥಗಳೇ ಆಗಿದ್ದರೂ, ದೇಹದ ಮೇಲೆ ಕೆಲಸ ಮಾಡುವ ವಿಧಾನ ಮಾತ್ರ ಬೇರೆ. ಹಾಗಾದ್ರೆ ಯಾವುದು ನಿಮಗೆ ಸೂಕ್ತ ಎಂಬುದನ್ನು ತಿಳಿದುಕೊಳ್ಳೋಣ.
- ದಾಲ್ಚಿನ್ನಿ ನೀರು: ದಾಲ್ಚಿನ್ನಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕಾರಿ. ಇದು ಇನ್ಸುಲಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ದೇಹದಲ್ಲಿ ಸಕ್ಕರೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಸಿಹಿ ತಿನ್ನುವ ಆಸೆಯನ್ನು ಕಂಟ್ರೋಲ್ ಮಾಡುತ್ತದೆ. ಇದರಿಂದ ಕ್ಯಾಲೊರಿ ಸೇವನೆ ಸ್ವತಃ ನಿಯಂತ್ರಣಕ್ಕೆ ಬರುತ್ತದೆ.
- ಶುಂಠಿ ನೀರು: ಶುಂಠಿ ದೇಹದ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಮೆಟಾಬಾಲಿಸಂ ಹೆಚ್ಚಾಗುವುದರಿಂದ ಕೊಬ್ಬು ಕರಗುವ ಪ್ರಕ್ರಿಯೆ ವೇಗವಾಗುತ್ತದೆ. ಜೊತೆಗೆ ಹೊಟ್ಟೆ ಉಬ್ಬರ, ಅಜೀರ್ಣ ಸಮಸ್ಯೆಗೂ ಪರಿಹಾರ ನೀಡುತ್ತದೆ.
ಯಾವುದು ಬೆಸ್ಟ್?
ಮಧುಮೇಹ ಸಮಸ್ಯೆ ಇದ್ದವರಿಗೆ ದಾಲ್ಚಿನ್ನಿ ನೀರು ಉತ್ತಮ. ಜೀರ್ಣಕ್ರಿಯೆ ನಿಧಾನವಾಗಿದ್ದರೆ ಶುಂಠಿ ನೀರು ಹೆಚ್ಚು ಪ್ರಯೋಜನಕಾರಿ. ತೂಕ ಇಳಿಕೆಗಾಗಿ ನಿಮ್ಮ ದೇಹದ ಅಗತ್ಯಕ್ಕೆ ತಕ್ಕದ್ದನ್ನು ಆಯ್ಕೆ ಮಾಡಿಕೊಳ್ಳುವುದೇ ಸರಿ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

