ನಮ್ಮ ಫೇವರಿಟ್ ಲೆದರ್ ಬ್ಯಾಗ್‌ಗಳು ಸ್ಟೈಲಿಶ್ ಆಗಿ ಕಾಣುವಷ್ಟೇ ಕಾಳಜಿಯೂ ಬೇಕಾಗುತ್ತೆ. ಆದರೆ ಒಂದು ಸಣ್ಣ ಕಲೆ ಅಥವಾ ಚುಕ್ಕೆ ಬಂದರೂ ಮನಸ್ಸಿಗೆ ಬೇಸರ ತರಬಹುದು. ಆದರೆ ದುಬಾರಿ ಬ್ಯಾಗ್ ಹಾಳಾಗುತ್ತದೆ ಎಂಬ ಆತಂಕ ಬೇಡ. ಮನೆಯಲ್ಲೇ ಸುಲಭವಾಗಿ ಲೆದರ್ ಬ್ಯಾಗ್ ಕ್ಲೀನ್ ಮಾಡಿಕೊಳ್ಳಬಹುದು. ಸರಿಯಾದ ವಿಧಾನವನ್ನು ಅನುಸರಿಸಿದರೆ, ನಿಮ್ಮ ಬ್ಯಾಗ್ ಹೊಸತರಂತೆಯೇ ಹೊಳೆಯುತ್ತದೆ.
- ಮೊದಲಿಗೆ ಒಣ ಬಟ್ಟೆಯಿಂದ ಧೂಳು ತೆಗೆಯಿರಿ: ಬ್ಯಾಗ್‌ನ ಮೇಲ್ಮೈಯಲ್ಲಿ ಇರುವ ಧೂಳು ಅಥವಾ ಕೊಳೆಯನ್ನು ಸಣ್ಣ ಮೃದು ಬಟ್ಟೆಯಿಂದ ನಿಧಾನವಾಗಿ ತೂಗಿ. ಯಾವುದೇ ಕ್ಲೀನಿಂಗ್ ಮಾಡುವ ಮೊದಲು ಇದು ಅಗತ್ಯದ ಹಂತ.
- ಹಾಲು ಅಥವಾ ವಿನೆಗರ್ ಬಳಸಿ ಕ್ಲೀನ್ ಮಾಡಿ: ಸ್ವಲ್ಪ ಹಾಲು ಅಥವಾ ವಿನೆಗರ್‌ನಲ್ಲಿ ಕಾಟನ್ ಬಾಲ್ ಅದ್ದಿ ಕಲೆ ಮೇಲೆ ಸವರಿ. ಕೆಲ ನಿಮಿಷಗಳ ನಂತರ ಒಣ ಬಟ್ಟೆಯಿಂದ ಒರಸಿ. ಇದರಿಂದ ಸಣ್ಣ ಕಲೆಗಳು ಸುಲಭವಾಗಿ ಹೋಗುತ್ತವೆ.
- ಲೆದರ್ ಕ್ಲೀನರ್ ಬಳಸಿ: ಮಾರುಕಟ್ಟೆಯಲ್ಲಿ ಸಿಗುವ ಸ್ಪೆಷಲ್ ಲೆದರ್ ಕ್ಲೀನರ್‌ಗಳನ್ನು ಬಳಸಬಹುದು. ಆದರೆ ಅತಿ ಹೆಚ್ಚು ಪ್ರಮಾಣದಲ್ಲಿ ಹಚ್ಚಬಾರದು. ನಿಧಾನವಾಗಿ ಮಸಾಜ್ ಮಾಡಿದರೆ ಕಲೆಗಳು ಮೃದುವಾಗಿ ಮಾಯವಾಗುತ್ತವೆ.
- ಬೇಬಿ ಆಯಿಲ್ ಅಥವಾ ಕೊಬ್ಬರಿ ಎಣ್ಣೆ ಹಚ್ಚಿ: ಕ್ಲೀನಿಂಗ್ ಆದ ನಂತರ ಸ್ವಲ್ಪ ಬೇಬಿ ಆಯಿಲ್ ಅಥವಾ ಕೊಬ್ಬರಿ ಎಣ್ಣೆ ಹಚ್ಚಿದರೆ ಲೆದರ್ ಮೃದುಗೊಳ್ಳುತ್ತದೆ ಮತ್ತು ಹೊಳಪು ಹೆಚ್ಚುತ್ತದೆ.
- ಕೊನೆಯಲ್ಲಿ ಬ್ಯಾಗ್ ಅನ್ನು ನೇರ ಬಿಸಿಲಿನಲ್ಲಿ ಒಣಗಿಸಬೇಡಿ, ಬದಲಾಗಿ ನೆರಳಿನಲ್ಲಿ ಇಟ್ಟು ಒಣಗಿಸಿ. ಈ ಟಿಪ್ಸ್ ಅನುಸರಿಸಿದರೆ ನಿಮ್ಮ ಫೇವರಿಟ್ ಲೆದರ್ ಬ್ಯಾಗ್ ಮತ್ತೆ ಹೊಸತರಂತೆಯೇ ಇರುತ್ತದೆ.

