Saturday, October 25, 2025

Cleaning Tips | ಪಾಚಿ ಕಟ್ಟಿರೋ ವಾಟರ್‌ ಕ್ಯಾನ್‌ ಕ್ಲೀನ್ ಮಾಡೋದು ಹೇಗೆ?

ಅನೇಕರು ಮನೆ ಅಥವಾ ಕಚೇರಿಗಳಲ್ಲಿ ಪ್ಯಾಕೇಜ್ ನೀರಿನ ಕ್ಯಾನ್‌ಗಳನ್ನು ಬಳಸುತ್ತಾರೆ. ಆದರೆ ಬಹುತೇಕ ಮಂದಿ ಈ ಕ್ಯಾನ್‌ಗಳನ್ನು ಸ್ವಚ್ಛಗೊಳಿಸುವ ಗೋಜಿಗೆ ಹೋಗೋದಿಲ್ಲ. ನಿಯಮಿತವಾಗಿ ನೀರಿನ ಕ್ಯಾನ್ ಸ್ವಚ್ಛಗೊಳಿಸದೇ ಇದ್ದರೆ ಬ್ಯಾಕ್ಟೀರಿಯಾ ಹಾಗೂ ಪಾಚಿ ಬೆಳೆಯುವ ಸಾಧ್ಯತೆ ಇದೆ, ಇದು ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ ಕ್ಯಾನ್ ಸ್ವಚ್ಛತೆ ಕಾಪಾಡುವುದು ಅತ್ಯಂತ ಮುಖ್ಯ.

  • ಬಿಸಿ ನೀರಿನಿಂದ ತೊಳೆಯಿರಿ: ಮೊದಲು ಕ್ಯಾನ್‌ನೊಳಗಿನ ಉಳಿದ ನೀರನ್ನು ಸಂಪೂರ್ಣವಾಗಿ ಹೊರ ಹಾಕಿ. ನಂತರ ಬಿಸಿ ನೀರು ಹಾಕಿ ಒಳಭಾಗವನ್ನು ಚೆನ್ನಾಗಿ ತೊಳೆದು, ಕೆಲವು ನಿಮಿಷಗಳ ಕಾಲ ಬಿಟ್ಟು ನಂತರ ನೀರನ್ನು ಹೊರಹಾಕಿ.
  • ವಿನೆಗರ್ ಅಥವಾ ಬೇಕಿಂಗ್ ಸೋಡಾ ಬಳಸಿ: ಬ್ಯಾಕ್ಟೀರಿಯಾ ನಾಶಕ್ಕೆ ನೈಸರ್ಗಿಕ ವಿಧಾನವಾಗಿ ಒಂದು ಲೀಟರ್ ನೀರಿಗೆ ಎರಡು ಚಮಚ ವಿನೆಗರ್ ಅಥವಾ ಬೇಕಿಂಗ್ ಸೋಡಾ ಸೇರಿಸಿ ಕ್ಯಾನ್‌ನೊಳಗೆ ಹಾಕಿ. 10 ನಿಮಿಷ ಬಿಟ್ಟು ನಂತರ ಶುದ್ಧ ನೀರಿನಿಂದ ತೊಳೆಯಿರಿ.
  • ಬ್ರಶ್ ಅಥವಾ ಕ್ಲೀನಿಂಗ್ ಸ್ಪಾಂಜ್ ಬಳಸಿ: ಕ್ಯಾನ್‌ನ ಒಳಭಾಗದ ಮೂಲೆಗಳಲ್ಲಿ ಧೂಳು ಅಥವಾ ಪಾಚಿ ಉಳಿದಿದ್ದರೆ ಬ್ರಶ್ ಅಥವಾ ಕ್ಲೀನಿಂಗ್ ಸ್ಪಾಂಜ್‌ನಿಂದ ನಿಧಾನವಾಗಿ ತೊಳೆಯಿರಿ.
  • ಶುದ್ಧ ನೀರಿನಿಂದ ಮರುತೊಳೆಯಿರಿ: ಯಾವುದೇ ಕ್ಲೀನಿಂಗ್ ದ್ರವ ಅವಶೇಷ ಉಳಿಯದಂತೆ, ಕೊನೆಯಲ್ಲಿ ಎರಡು ಬಾರಿ ಶುದ್ಧ ನೀರಿನಿಂದ ಕ್ಯಾನ್ ತೊಳೆಯುವುದು ಅಗತ್ಯ.
  • ಒಣಗಲು ಬಿಡಿ: ತೊಳೆಯುವ ಪ್ರಕ್ರಿಯೆ ನಂತರ ಕ್ಯಾನ್ ಅನ್ನು ಸಂಪೂರ್ಣವಾಗಿ ಒಣಗಲು ಬಿಡಿ. ಇದು ಬ್ಯಾಕ್ಟೀರಿಯಾ ವೃದ್ಧಿಯನ್ನು ತಡೆಯುತ್ತದೆ.
error: Content is protected !!