January19, 2026
Monday, January 19, 2026
spot_img

Cleaning Tips | ನೀವು ಬಳಸೋ beauty blender ತೊಳೆಯೋದಕ್ಕೂ ಒಂದು ವಿಧಾನ ಇದೆ! ತಿಳ್ಕೊಂಡು ಕ್ಲೀನ್ ಮಾಡಿ

ದೈನಂದಿನ ಮೇಕಪ್ ರೂಟೀನ್‌ನಲ್ಲಿ ಬ್ಯೂಟಿ ಬ್ಲೆಂಡರ್‌ ಒಂದು ಪ್ರಮುಖ ಸಾಧನ. ಆದರೆ ಅದನ್ನು ಬಳಸಿದ ನಂತರ ಹೇಗೆ ತೊಳೆಯಬೇಕು, ಎಷ್ಟು ಬಾರಿ ಕ್ಲೀನ್ ಮಾಡಬೇಕು ಎಂಬುದನ್ನು ಬಹುತೆಕ ಜನ ಗಮನಿಸೋದೇ ಇಲ್ಲ. ಕಣ್ಣಿಗೆ ಕಾಣದ ಧೂಳು, ಮೇಕಪ್ ಅವಶೇಷಗಳು ಮತ್ತು ಬ್ಯಾಕ್ಟೀರಿಯಾ ಈ ಸಣ್ಣ ಸ್ಪಾಂಜ್‌ನಲ್ಲಿ ಸೇರಿಕೊಳ್ಳುತ್ತವೆ. ಸರಿಯಾದ ಸ್ವಚ್ಛತೆ ಇಲ್ಲದಿದ್ದರೆ ಇದು ಚರ್ಮ ಸಮಸ್ಯೆಗಳಿಗೂ ಕಾರಣವಾಗಬಹುದು. ಹೀಗಾಗಿ ಬ್ಯೂಟಿ ಬ್ಲೆಂಡರ್ ಬಳಸುವುದಷ್ಟೇ ಅಲ್ಲ, ಅದನ್ನು ಸರಿಯಾಗಿ ಕ್ಲೀನ್ ಮಾಡುವುದೂ ಅಷ್ಟೇ ಮುಖ್ಯ.

ಬ್ಯೂಟಿ ಬ್ಲೆಂಡರ್‌ ಕ್ಲೀನ್ ಮಾಡುವುದು ಯಾಕೆ ಮುಖ್ಯ?
ಬ್ಲೆಂಡರ್ ಒಳಗೆ ಮೇಕಪ್ ಅವಶೇಷಗಳು ಸೇರಿಕೊಂಡರೆ ಚರ್ಮದ ರಂಧ್ರಗಳು ಮುಚ್ಚಿಕೊಳ್ಳಬಹುದು. ಇದರಿಂದ ಮೊಡವೆ, ಚರ್ಮದ ಅಲರ್ಜಿ ಮತ್ತು ಡೆಡ್ ಸ್ಕಿನ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. ಸ್ವಚ್ಛ ಸ್ಪಾಂಜ್ ಮೇಕಪ್‌ನ್ನು ಸಮವಾಗಿ ಹಚ್ಚಲು ಸಹ ಸಹಾಯ ಮಾಡುತ್ತದೆ.

ಸರಿಯಾದ ತೊಳೆಯುವ ವಿಧಾನ ಯಾವುದು?
ಮೊದಲು ಬ್ಯೂಟಿ ಬ್ಲೆಂಡರ್ ಅನ್ನು ಸ್ವಲ್ಪ ಬಿಸಿ ನೀರಿನಲ್ಲಿ ಚೆನ್ನಾಗಿ ನೆನೆಸಬೇಕು. ನಂತರ ಸೌಮ್ಯವಾದ ಲಿಕ್ವಿಡ್ ಸೋಪ್ ಅಥವಾ ಬೇಬಿ ಶಾಂಪೂ ಬಳಸಿ ನಿಧಾನವಾಗಿ ಒತ್ತಿ ತೊಳೆಯಬೇಕು. ಬಲವಾಗಿ ಒತ್ತಬಾರದು, ಇದರಿಂದ ಸ್ಪಾಂಜ್ ಹಾನಿಯಾಗಬಹುದು. ನೀರು ಸ್ಪಷ್ಟವಾಗಿ ಬರುವವರೆಗೆ ತೊಳೆಯುವ ಪ್ರಕ್ರಿಯೆ ಮುಂದುವರಿಸಬೇಕು.

ಆಳವಾದ ಸ್ವಚ್ಛತೆಗೆ ವಿಶೇಷ ಕಾಳಜಿ
ವಾರಕ್ಕೆ ಕನಿಷ್ಠ ಒಮ್ಮೆ ಬ್ಯೂಟಿ ಬ್ಲೆಂಡರ್‌ಗೆ ಡೀಪ್ ಕ್ಲೀನಿಂಗ್ ಅಗತ್ಯ. ಇದಕ್ಕಾಗಿ ವಿಶೇಷ ಸ್ಪಾಂಜ್ ಕ್ಲೀನರ್ ಅಥವಾ ಸ್ವಲ್ಪ ಬೇಕಿಂಗ್ ಸೋಡಾ ಬಳಸಿ ತೊಳೆಯಬಹುದು.

ತೊಳೆಯಿದ ನಂತರ ಬ್ಯೂಟಿ ಬ್ಲೆಂಡರ್ ಅನ್ನು ತೆರೆದ, ಗಾಳಿಯಾಡುವ ಜಾಗದಲ್ಲಿ ಒಣಗಿಸಬೇಕು. ತೇವಾಂಶ ಇರುವ ಜಾಗದಲ್ಲಿ ಇಟ್ಟರೆ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಹೆಚ್ಚಾಗುತ್ತದೆ.

Must Read

error: Content is protected !!