January21, 2026
Wednesday, January 21, 2026
spot_img

ಕರ್ನಾಟಕದಲ್ಲಿ ಹವಾಮಾನ ಬದಲಾವಣೆ: ಕರಾವಳಿಗೆ ಮಳೆ, ಉಳಿದ ಕಡೆ ಒಣಹವೆ ಇದ್ಯಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಹವಾಮಾನದಲ್ಲಿ ಗುರುವಾರ ಬೆಳಗ್ಗಿನಿಂದಲೇ ಸ್ವಲ್ಪ ತಂಪಿನ ವಾತಾವರಣ ಕಾಣಿಸಿಕೊಂಡಿದ್ದು, ಕರಾವಳಿ ಭಾಗದಲ್ಲಿ ಮಳೆಯ ಸುಳಿವು ನೀಡಿದೆ. ಆದರೆ ಉಳಿದ ಜಿಲ್ಲೆಗಳು ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಕೆಲವು ಪ್ರದೇಶಗಳಲ್ಲಿ ಹಗುರ ಮಳೆ ಬೀಳಬಹುದಾದರೆ, ದಕ್ಷಿಣ ಒಳನಾಡಿನ ಹಾಸನ, ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಒಂದೆರಡು ಕಡೆ ಮಾತ್ರ ಮಳೆ ಸಾಧ್ಯತೆ ಇದೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಣ್ಣ ಮಳೆಯ ನಿರೀಕ್ಷೆ ಇದ್ದರೂ, ಉತ್ತರ ಒಳನಾಡಿನ ಭಾಗಗಳು ಸಂಪೂರ್ಣ ಒಣ ಹವೆಯಿಂದ ಮುಂದುವರಿಯಲಿವೆ.

ನಾಳೆಯಿಂದ ಡಿಸೆಂಬರ್ 11ರವರೆಗೆ ರಾಜ್ಯಾದ್ಯಂತ ಮಳೆ ಸಂಪೂರ್ಣ ನಿಂತು, ಒಣ ಹವೆಯ ಒತ್ತಡ ಹೆಚ್ಚಾಗಲಿದ್ದು, ಒಳನಾಡಿನ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಕುಸಿಯಲಿರುವುದಾಗಿ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನಲ್ಲಿ 14ರಿಂದ 16 ಡಿಗ್ರಿ ನಡುವಿನ ತಾಪಮಾನ ದಾಖಲಾಗುವ ಸಾಧ್ಯತೆ ಇದ್ದು, ಕರಾವಳಿಯಲ್ಲಿ ತಾಪಮಾನ ಸ್ಥಿರವಾಗಿರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ನಾಳೆಯಿಂದ ಡಿಸೆಂಬರ್ 11ರವರೆಗೆ ರಾಜ್ಯದಾದ್ಯಂತ ಮಳೆ ಇರದೇ ಶುಷ್ಕ ವಾತಾವರಣ ಮುಂದುವರಿಯಲಿದೆ. ಒಳನಾಡು ಭಾಗಗಳಲ್ಲಿ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿಯುವ ಸಾಧ್ಯತೆಯಿದ್ದು, ಉತ್ತರ ಒಳನಾಡಿನಲ್ಲಿ ಕನಿಷ್ಠ ತಾಪಮಾನ 14ರಿಂದ 16 ಡಿಗ್ರಿ ಸೆಲ್ಸಿಯಸ್ ಮಟ್ಟಕ್ಕೆ ಇಳಿಯುವ ನಿರೀಕ್ಷೆ ಇದೆ.

Must Read