ಹೊಸ ದಿಗಂತ ವರದಿ, ವಿಜಯಪುರ:
ಮುಖ್ಯಮಂತ್ರಿ ಬದಲಾವಣೆ ಪಕ್ಷದ ಆಂತರಿಕ ವಿಚಾರವಾಗಿದ್ದು, ಮಾಧ್ಯಮದರು ಸೋತ ಎಂಎಲ್ಎ ಗಳ ಅಭಿಪ್ರಾಯ ಕೇಳುವುದರಲ್ಲಿ ಅರ್ಥವೇನಿದೆ ಎಂದು ಜವಳಿ, ಸಕ್ಕರೆ, ಎಪಿಎಂಸಿ ಖಾತೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ಮುಖ್ಯಮಂತ್ರಿ ಕುರ್ಚಿಗಾಗಿ ಫೈಟ್ ವಿಚಾರದ ಬಗ್ಗೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಎಐಸಿಸಿ ಅಧ್ಯಕ್ಷರು ಹೇಳಿದರೂ ಮಾಧ್ಯಮದವರು ಕೇಳಲ್ಲ ಎಂದರು.
ಎಐಸಿಸಿ ಅಧ್ಯಕ್ಷರು ಸ್ಪಷ್ಟವಾಗಿ ಹೇಳಿಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜಕಾರಣದಲ್ಲಿ ಕ್ಲೀಯರ್ ಆಗಿ ಹೇಳುಹಂಗೆ ಇರಲ್ಲ ರಾಜಕಾರಣ, ಆಗಂಗೆ ಆಗುತ್ತಿರುತ್ತದೆ, ಹೋಗಂಗೆ ಹೋಗುತ್ತಿರುತ್ತದೆ ಎಂದರು.
ಡಿಕೆಶಿ ಸಿಎಂ ಹುದ್ದೆಗೆ ಪಟ್ಟು ಹಿಡಿದಿದ್ದಾರೆ ಎನ್ನುವ ವಿಚಾರಕ್ಕೆ, ಯಾರಿಗೆ ಆಸೆ ಇರಲ್ಲ ಹೇಳಿ. ಕಾಂಗ್ರೆಸ್ ನಲ್ಲಿ ಸಿಎಂ ರೇಸ್ ನಲ್ಲಿರೋರು ಬಹಳ ಮಂದಿ ಇದ್ದಾರೆ. ಸಿಎಂ ಹುದ್ದೆ ಒಂದೇ ಇದ್ದರೆ ಇಬ್ಬರು, ಮೂವರು ಮಂದಿಗೆ ಸಿಎಂ ಆಸೆಯಿದೆ. ಯಾರ್ಯಾರಿಗೆ ಆಸೆ ಇದೆ, ಆಗಲಿ ನಾವು ಆಸೆ ಪಡುತ್ತೇವೆ ಎಂದರು.
ಡಿಕೆಶಿ ಸಿಎಂ ಈಗ ಆಗಬಹುದು, ನಾಳೆ ಆಗಬಹುದು ನಾನು ಹೇಗೆ ಹೇಳಲಿಕ್ಕೆ ಬರುತ್ತೆ. ಪಕ್ಷ, ಸಿಎಲ್ಪಿ ನಿರ್ಣಯ ಮಾಡುತ್ತೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುವ ವಿಚಾರಕ್ಕೆ, ಅತ್ಯಂತ ಅರ್ಹತೆ ಇರುವ ಮನುಷ್ಯ. ಒಂದು ಕಾಲದಲ್ಲಿ ಅವರಿಗೆ ವೋಟ್ ಹಾಕದೇ ನಾನೇ ತಪ್ಪು ಮಾಡಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ವೋಟ್ ಹಾಕಿಲ್ಲ ಅಂತ ತಪ್ಪುಮಾಡಿದ್ದೇನೆ ಎಂದರು.
ಡಿಕೆಶಿ ಸಿಎಂ ಆಗಲಿ ಎಂದು ಶಾಸಕರು, ಸಚಿವರು ದೆಹಲಿಗೆ ಓಡಾಡುತ್ತಿರೋ ವಿಚಾರ ಬಗ್ಗೆ, ಯಾರು ಓಡಾಡುತ್ತಿಲ್ಲ, ಮಾಧ್ಯಮದವರೇ ಓಡಾಡುಸುತ್ತಿದ್ದೀರಿ. ದೆಹಲಿಗೆ ಹೋಗುವವರದು ತಪ್ಪಿದ್ಯಾ ?, ಶಾಸಕ ಶಿವಗಂಗಾ ಇವತ್ತು ಅಲ್ಲ ಹತ್ತು ಬಾರಿ ಹೇಳಿರಬೇಕು. ಅವನೊಬ್ಬನೇ ಹೇಳಿದರೆ ಎಲ್ಲಾರೂ ಹೇಳಿದಂತೆ ಆಗುತ್ತಾ ?, ಶಿವಗಂಗಾ ಹತ್ತು ಬಾರಿ ಹೇಳಿರಬೇಕು, ಹೊಸದಾಗಿ ಶಾಸಕರಾಗಿದ್ದಾರೆ. ಹೊಸದಾಗಿ ಹೇಳುತ್ತಿರುತ್ತಾರೆ, ಅದು ನಡೆಯುತ್ತೆ. ನಮ್ಮಲ್ಲಿ ಹೊಡೆತ ತಿಂದ ಮೇಲೆ ಕಲಿಯುತ್ತೇವೆ ಎಂದರು.

