February 6, 2026
Friday, February 6, 2026
spot_img

ಪುಟ್ಟ ಬಾಲಕನ ಮಾತು ಕೇಳಿ ಮುಗುಳ್ನಕ್ಕ ಸಿಎಂ ಯೋಗಿ: ಅಷ್ಟಕ್ಕೂ ಆ ಮಗುವಿನ ಡಿಮ್ಯಾಂಡ್ ಏನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗಿನ ಒಂದು ಪುಟ್ಟ ಬಾಲಕನ ಸರಳ ಮತ್ತು ಮುಗ್ಧ ಬೇಡಿಕೆಯ ಮಾತುಕತೆಗಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಮುಖದಲ್ಲಿ ನಗು ತರಿಸಿದೆ.

ಇದು ಅಧಿಕಾರ, ಹುದ್ದೆ ಮತ್ತು ಪ್ರೋಟೋಕಾಲ್‌ಗಳಾಚೆಗೂ ಜನನಾಯಕರಲ್ಲಿರುವ ಸಹಜ ಮಾನವೀಯತೆಯನ್ನು ತೋರಿಸಿದ ಘಟನೆಯೆಂದು ನೆಟ್ಟಿಗರ ಗಮನ ಸೆಳೆದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವೀಡಿಯೊದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಪಕ್ಕದಲ್ಲಿ ಕುಳಿತಿದ್ದ ಪುಟ್ಟ ಬಾಲಕನನ್ನು ಪ್ರೀತಿಯಿಂದ ಮಾತನಾಡಿಸುತ್ತಿರುವುದು ಕಾಣುತ್ತದೆ. ಆ ವೇಳೆ ಆ ಪುಟ್ಟ ಹುಡುಗನನ್ನು ಯೋಗಿಯವರು, ನಿನಗೆ ಏನು ಬೇಕು ಎಂದು ಕೇಳಿದಾಗ, ಬಾಲಕನು ಅವರ ಕಿವಿಯಲ್ಲಿ ನಿಧಾನವಾಗಿ ಏನೋ ಹೇಳುತ್ತಾನೆ. ಆದರೆ, ಮೊದಲು ಆ ಹುಡುಗ ಹೇಳಿದ್ದು ಸ್ಪಷ್ಟವಾಗಿ ಕೇಳಿಸದಿದ್ದರೂ, ಬಾಲಕನು ಚಿಪ್ಸ್ ಬೇಕು ಎಂದು ಕೇಳುತ್ತಿದ್ದಾನೆ ಎಂಬುದನ್ನು ತಿಳಿದ ಕ್ಷಣ ಯೋಗಿ ಆದಿತ್ಯನಾಥ್ ನಗುವಿನ ಅಲೆಯಲ್ಲಿ ತೇಲುತ್ತಾರೆ. ಜೊತೆಗೆ ಅಲ್ಲಿದ್ದ ಇತರರೂ ಸಹ ಆ ಮುಗ್ಧ ಬೇಡಿಕೆಗೆ ನಗುತ್ತಾ ಪ್ರತಿಕ್ರಿಯಿಸುತ್ತಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ, ನೆಟ್ಟಿಗರು ಹಾಸ್ಯಭರಿತ ಕಾಮೆಂಟ್‌ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. ಕೆಲವರು ಬಾಲಕನ ಸ್ಪಷ್ಟ ಆದ್ಯತೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಹಾಸ್ಯದ ಮೂಲಕ ಪ್ರತಿಕ್ರಿಯಿಸಿದ್ದಾರೆ. ಅದರಂತೆ, ದೊಡ್ಡ ಬೇಡಿಕೆಗಳ ಬದಲು ಸಣ್ಣ ಸಂತೋಷವೇ ಮುಖ್ಯ ಎಂಬ ಸಂದೇಶವನ್ನು ಈ ಬಾಲಕ ನೀಡಿದಂತೆ ಅನಿಸುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !