ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್‌ನ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿರುವ ಟೀಂ ಇಂಡಿಯಾ, ಒಂದೇ ಮ್ಯಾಚ್ ಮೂಲಕ ಮೂರು ದಾಖಲೆ ಸೃಷ್ಟಿಸಿದೆ. ಈ ಮೂಲಕ ಕೋಚ್ ಗೌತಮ್ ಗಂಭೀರ್ ಹೆಮ್ಮೆಪಡುವಂತಾಗಿದೆ.
ನ್ಯೂಜಿಲೆಂಡ್, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಂಭೀರ್ ಪಡೆ ಸೋಲು ಅನುಭವಿಸಿತ್ತು. ಇದೀಗ ಟಿ20 ವಿಶ್ವಕಪ್‌ನಲ್ಲಿ ಗೆಲುವು ಸಾಧಿಸಿ ಟೀಂ ಇಂಡಿಯಾ ಎಲ್ಲರಿಗೂ ಹೆಮ್ಮೆಯಾಗುವಂತೆ ಮಾಡಿದೆ.
ಈ ಬಗ್ಗೆ ಗೌತಮ್ ಗಂಭೀರ್ ಮಾತನಾಡಿದ್ದು, ನನ್ನ ತಂಡದ ಈ ಗೆಲುವನ್ನು ಇಬ್ಬರಿಗೆ ಅರ್ಪಿಸುತ್ತೇನೆ ಎಂದಿದ್ದಾರೆ. ಮಾಜಿ ಕೋಚ್ ರಾಹುಲ್ ದ್ರಾವಿಡ್ ಹಾಗೂ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರಿಗೆ ಈ ಗೆಲುವು ಅರ್ಪಣೆ. ನಮ್ಮ ತಂಡಕ್ಕೆ ಒಂದು ಉತ್ತಮ ಸ್ಥಾನ ನೀಡಿದ್ದಾರೆ. ನನ್ನ ಕಷ್ಟದಲ್ಲಿ ಜೊತೆಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಗುವ ಚರ್ಚೆಗಳಿಗೆ ನಾನು ಜವಾಬ್ದಾರ ಅಲ್ಲ.ಡ್ರೆಸ್ಸಿಂಗ್ ರೂಮ್‌ನಲ್ಲಿರುವ ನಮ್ಮ ಟೀಂ ಮೆಂಬರ್ಸ್‌ಗೆ ಮಾತ್ರ ನಾನು ಜವಾಬ್ದಾರಿ ಎಂದಿದ್ದಾರೆ.



