Tuesday, December 16, 2025

ಉತ್ತರ ಒಳನಾಡನ್ನು ಬಿಡದ ಚಳಿ🥶, ರಾಜ್ಯದ ಈ ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌🟡

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಳೆದೊಂದು ವಾರದಿಂದ ರಾಜ್ಯಾದ್ಯಂತ ಜನ ಚಳಿಯಿಂದ ನಡುಗುತ್ತಿದ್ದಾರೆ. ಚಳಿ ಜತೆ ಕೆಲವು ಕಡೆ ಮಳೆ ಕೂಡ ಬರುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಶೀತಗಾಳಿ ಎಚ್ಚರಿಕೆಯನ್ನು ಹವಮಾನ ಇಲಾಖೆ ನೀಡಿದೆ. ಇನ್ನು ಕನಿಷ್ಠ ತಾಪಮಾನಕ್ಕೆ ಫೆಸಿಪಿಕ್ ಮಹಾಸಾಗರದಲ್ಲಿನ ಲ್ಯಾನಿನೋ ಕಾರಣವಾಗಿದೆ. ಲ್ಯಾನಿನೋ ಎಂದರೆ ಪೆಸಿಫಿಕ್ ಮಹಾಸಾಗರದ ಮೇಲ್ಮೈ ಉಷ್ಣಾಂಶವು ಸಾಮಾನ್ಯಕ್ಕಿಂತ ಕಡಿಮೆಯಾಗುವ ಹವಾಮಾನ ವಿದ್ಯಮಾನವಾಗಿದೆ.

ಕಲ್ಯಾಣ ಕರ್ನಾಟಕದ ಬೀದರ್​, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ನಾಳೆ ಯೆಲ್ಲೋ ಅಲರ್ಟ್​​ ಘೋಷಿಸಲಾಗಿದ್ದು, ಚಳಿಯ ಪ್ರಮಾಣ ಅಧಿಕವಾಗಿರಲಿದೆ. ಈ ಭಾಗದ ಉಳಿದ ಜಿಲ್ಲೆಗಳ ಜೊತೆ ಉತ್ತರ ಮತ್ತು ಮಧ್ಯ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲೂ ಜನರಿಗೆ ಚಳಿಯ ಅನುಭವ ಆಗಲಿದೆ.

ಉತ್ತರ ಒಳನಾಡನ ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ವಿಜಯನಗರ, ಯಾದಗಿರಿ, ರಾಯಚೂರು, ಗದಗ, ಧಾರವಾಡ, ಹಾವೇರಿ ಮತ್ತು ಕೊಪ್ಪಳದಲ್ಲಿ ಒಣ ಹವೆ ಅಥವಾ ಸಾಧಾರಣ ಚಳಿ ಕಂಡುಬರಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ವಿಜಯನಗರ ಮತ್ತು ಕೊಡಗು ಜಿಲ್ಲೆಗಳ ಜನರಿಗೂ ಚಳಿಯ ಅನುಭವ ಆಗಲಿದೆ.

error: Content is protected !!