ಹೊಸದಿಗಂತ ಡಿಜಿಟಲ್ ಡೆಸ್ಕ್:
90-2000 ದಶಕದಲ್ಲಿ ಬಾಲಿವುಡ್ ಅನ್ನೇ ಆಳಿದ ನಟಿ ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಬಳಿ ಮಗಳ ಶಾಲೆಯ ಶುಲ್ಕ ಕಟ್ಟಲು ಸಹ ಹಣವಿಲ್ಲವಂತೆ.
ಹೌದು, ಕರಿಶ್ಮಾ ಕಪೂರ್ ಅವರು ‘ನಾನು ಮಗಳ ಶಾಲೆಯ ಶುಲ್ಕವನ್ನು ಎರಡು ತಿಂಗಳಿಂದಲೂ ಕಟ್ಟಲು ಆಗಿಲ್ಲ ನನ್ನ ಬಳಿ ಹಣವಿಲ್ಲ’ ಎಂದಿದ್ದಾರೆ. ಕರಿಶ್ಮಾ ಅವರ ಈ ಹೇಳಿಕೆ ಕಪೂರ್ ಕುಟುಂಬದ ಅಭಿಮಾನಿಗಳಿಗೆ ಆಶ್ಚರ್ಯ ತಂದಿದೆ.
ಕರಿಶ್ಮಾ ಕಪೂರ್ ಮಾಜಿ ಪತಿ ಹಾಗೂ ಉದ್ಯಮಿ ಸಂಜಯ್ ಕಪೂರ್ ಸಾವಿನ ನಂತರ ಅವರ ಆಸ್ತಿಗಾಗಿ ಅವರ ತಾಯಿ, ಇಬ್ಬರು ಪತ್ನಿಯರು ಹಾಗೂ ಮೂವರು ಮಕ್ಕಳ ಹೋರಾಟ ಕೋರ್ಟ್‌ನಲ್ಲಿ ಮುಂದುವರೆದಿದೆ.
2ನೇ ಪತ್ನಿ ಸಂಜಯ್ ಕಪೂರ್ ಅವರ ಸಾವಿನ ನಂತರ ಅವರ ಆಸ್ತಿಯೆಲ್ಲಾ 2ನೇ ಪತ್ನಿ ಪ್ರಿಯಾ ಸಚ್‌ದೇವ್ ಕಪೂರ್ ಅವರಿಗೆ ಸೇರಿದೆ ಎಂದು ಸಂಜಯ್ ಕಪೂರ್ ಅವರು ವ್ಹೀಲ್ ಬರೆದಿದ್ದಾರೆ ಎಂದು ಹೇಳಿದ ನಂತರ ಇಬ್ಬರು ಪತ್ನಿಯರು ಹಾಗೂ ಮಕ್ಕಳು ಹಾಗೂ ಸಂಜಯ್ ಅವರ ತಾಯಿ ಕೋರ್ಟ್ ಮೆಟ್ಟಿಲೇರಿದ್ದು, ಪ್ರಿಯಾ ಅವರು ಪೋರ್ಜರಿ ವ್ಹೀಲ್ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಈ ಪ್ರಕರಣದ ವಿಚಾರಣೆ ದೆಹಲಿ ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದು, ಸಂಜಯ್ ಕಪೂರ್ ಹಾಗೂ ಕರೀಷ್ಮಾ ಕಪೂರ್ ಅವರ ಪುತ್ರಿ ಸಮೈರಾ ಅವರು ಪ್ರಕರಣದ ವಿಚಾರಣೆ ವೇಳೆ ತನ್ನ ಎರಡು ತಿಂಗಳ ಕಾಲೇಜು ಶುಲ್ಕವನ್ನು ತನ್ನ ದಿವಂಗತ ತಂದೆ ಕೈಗಾರಿಕೋದ್ಯಮಿ ಸಂಜಯ್ ಕಪೂರ್ ಅವರ ಎಸ್ಟೇಟ್‌ನಿಂದ ಪಾವತಿಸಿಲ್ಲ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ದೆಹಲಿ ಹೈಕೋರ್ಟ್, ಈ ಪ್ರಕರಣದ ಭಾಗಿದಾರರು ಅತೀಯಾದ ನಾಟಕ ಮಾಡ್ಬೇಡಿ ಎಂದು ಹೇಳಿದೆ.
ಸಂಜಯ್ ಕಪೂರ್ ಅವರಿಗೆ ಸೇರಿದ 30,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಕುರಿತಾದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಕರೀಷ್ಮಾ ಕಪೂರ್ ಅವರ ಮಕ್ಕಳಾದ ಸಮೈರಾ ಮತ್ತು ಕಿಯಾನ್ ಅವರನ್ನು ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಪ್ರತಿನಿಧಿಸುತ್ತಿದ್ದಾರೆ. ಸಮೈರಾ ಅವರು ಅಮೆರಿಕಾದಲ್ಲಿ ಓದುತ್ತಿದ್ದು, ತಂದೆಯ ಆಸ್ತಿಗಾಗಿ ಅವರು ಅರ್ಜಿ ಸಲ್ಲಿಸಿದ ನಂತರ ಅವರ ಶಿಕ್ಷಣಕ್ಕಾಗಿ ಎರಡು ತಿಂಗಳ ವೆಚ್ಚವನ್ನು ದಿವಂಗತ ಕೈಗಾರಿಕೋದ್ಯಮಿ ಅವರ ಪತ್ನಿ ಪ್ರಿಯಾ ಕಪೂರ್ ಬಿಡುಗಡೆ ಮಾಡಿಲ್ಲ ಎಂದು ಅವರು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾ ಕಪೂರ್ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಜೀವ್ ನಾಯರ್, ಈ ಹೇಳಿಕೆಯು ಕಟ್ಟುಕಥೆ ಮತ್ತು ಆಧಾರರಹಿತ ಎಂದರು. ಅವರು ಮಕ್ಕಳ ಅಗತ್ಯಗಳನ್ನು ನಿರಂತರವಾಗಿ ನೋಡಿಕೊಂಡಿದ್ದಾರೆ ಮತ್ತು ಶುಲ್ಕವನ್ನು ಈಗಾಗಲೇ ಪಾವತಿಸಲಾಗಿದೆ ಎಂದು ಹೇಳಿದರು. ಮಾಧ್ಯಮಗಳಲ್ಲಿ ವರದಿ ಆಗಬೇಕೆಂದೇ ಈ ವಿಚಾರವನ್ನು ಇವರು ನ್ಯಾಯಾಲಯದಲ್ಲಿ ಪ್ರಸ್ತಾಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇಬ್ಬರು ವಕೀಲರ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ಪೀಠವು, ಇಂತಹ ಸಮಸ್ಯೆಗಳು ನ್ಯಾಯಾಲಯಕ್ಕೆ ಬರಬಾರದು ಎಂದು ಹೇಳಿದರು. ಪ್ರಿಯಾ ಕಪೂರ್ ಅವರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಶೈಲ್ ಟ್ರೆಹಾನ್ ಅವರನ್ನು ಕರೆದು, ಇಂತಹ ಸಮಸ್ಯೆಗಳು ಇತ್ಯರ್ಥವಾಗುವಂತೆ ನೋಡಿಕೊಳ್ಳುವಂತೆ ಕೇಳಿದರು. ನಾನು ಇದಕ್ಕಾಗಿ 30 ಸೆಕೆಂಡುಗಳಿಗಿಂತ ಹೆಚ್ಚು ಸಮಯ ನೀಡಲು ಬಯಸುವುದಿಲ್ಲ. ಈ ಪ್ರಶ್ನೆ ಮತ್ತೆ ನನ್ನ ಬಳಿ ಬರಬಾರದು. ಈ ವಿಚಾರಣೆಯು ನಾಟಕೀಯವಾಗಿರಲು ನಾನು ಬಯಸುವುದಿಲ್ಲ. ನಾನು ಈ ಜವಾಬ್ದಾರಿಯನ್ನು ನಿಮ್ಮ ಮೇಲೆ (ಶೈಲ್ ಟ್ರೆಹಾನ್) ಹಾಕುತ್ತೇನೆ ಎಂದು ಅವರು ಹೇಳಿದರು.
ಕಳೆದ ಜೂನ್‌ನಲ್ಲಿ ಲಂಡನ್‌ನಲ್ಲಿ ನಡೆದ ಪೋಲೊ ಪಂದ್ಯದ ವೇಳೆ ಸಂಜಯ್ ಕಪೂರ್ ಹಠಾತ್ ನಿಧನರಾದರು. ಸಂಜಯ್ ಕಪೂರ್ ಸಾವಿನ ನಂತರ ಆಸ್ತಿಯ ಸಂಪೂರ್ಣ ನಿಯಂತ್ರಣವನ್ನು ಪಡೆಯುವ ಪ್ರಯತ್ನದಲ್ಲಿ ಸಂಜಯ್ ಹಾಲಿ ಪತ್ನಿ ಪ್ರಿಯಾ ಕಪೂರ್ ಅವರು ಈ ವ್ಹೀಲ್ ಅನ್ನು ನಕಲಿ ಮಾಡಿದ್ದಾರೆ ಎಂದು ಸಮೈರಾ ಮತ್ತು ಕಿಯಾನ್ ಆರೋಪಿಸಿದ್ದಾರೆ.

