Friday, January 9, 2026

ನಂದಿಬೆಟ್ಟದ ಬಳಿ ಅಮಾನವೀಯವಾಗಿ 14 ನಾಯಿಮರಿಗಳ ಎಸೆದು ಹೋದ ಕಾಲೇಜು ಸಿಬ್ಬಂದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿಕ್ಕಬಳ್ಳಾಪುರದ ಎಸ್‌ಜೆಸಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಸಿಬ್ಬಂದಿ 14 ನಾಯಿಗಳನ್ನು ನಂದಿಬೆಟ್ಟದ ಬಳಿ ಎಸೆದು ಹೋಗಿದ್ದಾರೆ. ಈ ಪೈಕಿ 13 ಮರಿಗಳನ್ನು ಫ್ರೆಂಡ್ ಫಾರ್ ಅನಿಮಲ್ ಟ್ರಸ್ಟ್ ಸದಸ್ಯರು ರಕ್ಷಣೆ ಮಾಡಿದ್ದಾರೆ.

ಫ್ರೆಂಡ್ ಫಾರ್ ಅನಿಮಲ್ ಟ್ರಸ್ಟ್ ಸಂಸ್ಥಾಪಕ ವಿಕಾಶ್ ಎ. ಬಾಫ್ನಾ ಮಾತನಾಡಿ, ನಾಯಮರಿಗಳು 20 ದಿನಗಳ ಹಿಂದೆ ಜನಿಸಿದ್ದು, ಬಿಜಿಎಸ್ ಪಾಲಿಟೆಕ್ನಿಕ್ ಕಾಲೇಜಿನ ಹೆಸರನ್ನು ಹೊಂದಿರುವ ವಾಹನದ ಭದ್ರತಾ ಸಿಬ್ಬಂದಿ ಸೇರಿ ಮೂವರು ಈ ನಾಯಿ ಮರಿಗಳನ್ನು ಎಸೆದು ಹೋಗುತ್ತಿರುವುದನ್ನು ಪ್ರಯಾಣಿಕನೊಬ್ಬ ನೋಡಿದ್ದಾನೆಂದು ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ರಕ್ಷಣೆಗೆ ಧಾವಿಸಲಾಗಿತ್ತು. ನಾಯಿಮರಿಗಳನ್ನು ಬೆಂಗಳೂರು-ಹೈದರಾಬಾದ್ ಹೆದ್ದಾರಿ ಬಳಿ ಎಸೆಯಲಾಗಿತ್ತು. ಪೊದೆಗಳ ಮಧ್ಯೆ ನಾಯಿಗಳನ್ನು ಎಸೆದಿದ್ದರು. ರಕ್ಷಣೆ ಬಹಳ ಕಷ್ಟಕರವಾಗಿತ್ತು. 14 ಮರಿಗಳ ಪೈಕಿ 13 ಮರಿಗಳನ್ನು ರಕ್ಷಣೆ ಮಾಡಲಾಗಿದೆ. ಒಂದು ಮರಿ ಪತ್ತೆಯಾಗಿಲ್ಲ. 13 ಮರಿಗಳ ಪೈಕಿ ಒಂದು ನಾಯಿಮರಿ ವಾಹನದ ಹೊಡೆತಕ್ಕೆ ಸಿಲುಕಿ ತೀವ್ರವಾಗಿ ಗಾಯಗೊಂಡಿದೆ.

error: Content is protected !!