Wednesday, December 3, 2025

ಡಿ.14 ರಂದು ಮತಗಳ್ಳತನದ ವಿರುದ್ಧ ದೆಹಲಿಯಲ್ಲಿ ಸಮಾವೇಶ: ಡಿಸಿಎಂ ಡಿ.ಕೆ ಶಿವಕುಮಾರ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಡಿಸೆಂಬರ್.14 ರಂದು ಮತಗಳ್ಳತನದ ವಿರುದ್ಧ ದೆಹಲಿಯಲ್ಲಿ ಸಮಾವೇಶ ನಡೆಸಲಾಗುತ್ತದೆ. ರಾಜ್ಯದಿಂದ ಪ್ರತಿ ಜಿಲ್ಲೆಯಿಂದ 300 ಜನರನ್ನು ರೈಲು ಮೂಲಕ ಜನರನ್ನು ಕರೆದೊಯ್ಯಲು ಸೂಚಿಸಲಾಗಿದೆ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ. 14 ರಂದು ಮತಗಳ್ಳತನದ ವಿರುದ್ಧ ದೆಹಲಿ ರಾಮಲೀಲಾ ಮೈದಾನದಲ್ಲಿ ಸಮಾವೇಶ ಆಯೋಜಿಸಲಾಗಿದೆ. ರಾಜ್ಯದಿಂದ ಹೆಚ್ಚಿನ ಜನರನ್ನು ಸಭೆಗೆ ಕರೆತರಲು ಸೂಚಿಸಿದ್ದೇನೆ ಎಂದರು.

ಎಲ್ಲಾ ಸಚಿವರು, ಶಾಸಕರಿಗೆ ಹೇಳಿದ್ದೇನೆ. ಪ್ರತಿ ಜಿಲ್ಲೆಯಿಂದ 300 ಜನರನ್ನು ಕರೆದೊಯ್ಯಲು ಸೂಚಿಸಿದ್ದೇನೆ. ಬೆಂಗಳೂರಿನಿಂದಲೇ ಹೆಚ್ಚು ಜನರನ್ನು ಕರೆದುಕೊಂಡು ಹೋಗಬೇಕಿದೆ ಎಂದು ಹೇಳಿದರು.

ಜನರನ್ನು ರೈಲುಗಳಲ್ಲಿ ದೆಹಲಿಗೆ ಕರೆದೊಯ್ಯಲು ನಿರ್ಧಾರ ಮಾಡಿದ್ದೇವೆ. ಸಚಿವರು, ಶಾಸಕರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಚಿಸಿದ್ದೇನೆ. ನಿಮ್ಮ ಜವಾಬ್ದಾರಿ ಇದೆ. ನೀವೇ ಮಾಡಬೇಕು ಎಂಬುದಾಗಿ ಹೇಳಿದ್ದೇನೆ ಎಂದರು.

error: Content is protected !!