ಹೊಸದಿಗಂತ ವರದಿ,ಬೆಳಗಾವಿ:
ರಾಜ್ಯದಲ್ಲಿ ದಲಿತ ಶಾಸಕರ ಮೇಲೆ ನಿರಂತರ ಷಡ್ಯಂತ್ರ ಮತ್ತು ಅನ್ಯಾಯ ನಡೆಯುತ್ತಿದ್ದು, ಪಕ್ಷಾತೀತವಾಗಿ ಇದರ ವಿರುದ್ಧ ಧ್ವನಿ ಎತ್ತಬೇಕಿದೆ. 2013-14 ರಲ್ಲಿದ್ದ ಸಿದ್ದರಾಮಯ್ಯ ಈಗಿಲ್ಲ. ಸಿಎಂ ಸ್ಥಾನ ನಡೆಸುವ ಶಕ್ತಿ ಅವರಲ್ಲಿ ಉಳಿದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಸೋಮವಾರ ನಗರದ ಸರ್ಕಿಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಪಕ್ಷಾತೀತವಾಗಿ ದಲಿತ ಶಾಸಕರು ಮತ್ತು ಜನಪ್ರತಿನಿಧಿಗಳ ಮೇಲೆ ಅನ್ಯಾಯ ಮಾಡಲಾಗುತ್ತಿದೆ. ಇದರ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಅದೇ ಸಮಾಜದ ವ್ಯಕ್ತಿ ಮತ್ತು ಸ್ವಾಮಿಜೀ ಕೂಡಿಕೊಂಡು ಶಾಸಕ ಚಂದ್ರು ಲಮಾಣಿ ಅವರ ಅವರ ವಿರುದ್ಧ ಪಿತೂರಿ ನಡೆಸಿ ಷಡ್ಯಂತ್ರ ನಡೆಸಲಾಗಿದೆ ಎಂದರು.
ಒಂದು ವೇಳೆ ಚಂದ್ರು ಲಮಾಣಿ ತಪ್ಪಿತಸ್ಥರಾಗಿದ್ದರೆ ಅವರ ವಿರುದ್ಧ ಕ್ರಮವಾಗಲಿ ಎಂದರು. ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಪಾರದರ್ಶಕ ತನಿಖೆಗೆ ಆಗ್ರಹಿಸಲಾಗುವುದು ಎಂದರು. ಇನ್ನು ಧಾರವಾಡ ಲೋಕೋಪಯೋಗಿ ಮುಖ್ಯ ಅಭಿಯಂತರ ಸುರೇಶ್ ಅವರ ಮೇಲೂ ನಿವೃತ್ತಿಯ ದಿನವೇ ಸಂಜೆ ದಾಳಿ ನಡೆಸಿರುವುದು ವಿಷಾದನೀಯ ಎಂದರು.
ನಮನ್ನು ಕೂಡ ತುಳಿಯಲಾಗಿದೆ. ಆದರೇ, ಹೋರಾಟದ ಮೂಲಕ ನಾವು ಹೊರ ಬಂದಿದ್ದೇವೆ.ರಾಜ್ಯ ಸರಕಾರ ಲೂಟಿ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಕೇವಲ ಕುರುಬರ ನಾಯಕರಲ್ಲ. ಹಿಂದುಳಿದ ನಾಯಕರು. ನಾನು ವಾಲ್ಮೀಕಿ ನಾಯಕಲ್ಲ. ಹಿಂದುಳಿದ ವರ್ಗದವರ ನಾಯಕ. 2013-14 ರಲ್ಲಿದ್ದ ಸಿದ್ಧರಾಮಯ್ಯ ಈಗಿಲ್ಲ. ಸಿಎಂ ಸ್ನಾನ ನಡೆಸುವ ಶಕ್ತಿ ಅವರಲ್ಲಿ ಉಳಿದಿಲ್ಲ ಎಂಬುದು ಖೇದಕರ ಎಂದರು.
ನಕಲಿ ಜಾತಿ ಪ್ರಮಾಣಪತ್ರಗಳ ಕುರಿತು ಮನವಿ ಮಾಡಿದರೂ ಕ್ರಮಗೊಳ್ಳದ ವಿಚಾರಕ್ಕೆ ಸಂಬಂಧಿಸಿದಂತೆ 2028ಕ್ಕೆ ನಮ್ಮ ಸರಕಾರ ಬಂದಾಗ ಅವಾಗ ತೋರಿಸುತ್ತೇನೆ ಎಂದರು. ಇನ್ನು ರಮೇಶ್ ಜಾರಕಿಹೊಳಿ ಮತ್ತೆ ಕಾಂಗ್ರೆಸ್ಸಿಗೆ ಮಗಳುತ್ತಾರಾ ಎಂಬ ಪ್ರಶ್ನೆಗೆ ಆದಷ್ಟು ಶೀಘ್ರದಲ್ಲೆ ಇದನ್ನ ತಡೆಹಿಡಿಯದಿದ್ದರೇ ಪಕ್ಷಕ್ಕೆ ಹಾನಿಯಾಗುತ್ತದೆ. ಪೋಸ್ಟರ್ ಹಚ್ಚಿ ಟಿವಿಯಲ್ಲಿ ಹೇಳಿದರೇ, ರಮೇಶ್ ಇರಲಿ ಸತೀಶ್ ಜಾರಕಿಹೊಳಿ ಇರಲಿ ಹಿಂಬಾಲಕರಿದ್ದರೇ ಸಿಎಂ. ಆಗಲ್ಲ. ಸಿಎಂ ಆಗುವಂತಹ ಪೂರಕ ವಾತಾವರಣವಿರಬೇಕು ಎಂದರು.
ಇನ್ನು ಬಿಜೆಪಿಗೆ ಯಾರ ಅವಶ್ಯತೆಯೂ ಇಲ್ಲ. ನಾವು ಯಾರಿಗೂ ಆಹ್ವಾನ ಕೊಡುತ್ತಿಲ್ಲ.. ಇನ್ನು ಬೆಳಗಾವಿ ಇರಲಿ ಬೀದರ್ ಇರಲಿ ಎಲ್ಲವನ್ನು ಸರಿಪಡಿಸಿದರೇ, 2028 ರಲ್ಲಿ ಬಿಜೆಪಿ 120 ಸ್ಥಾನ ಗೆಲ್ಲಲಿದೆ ಎಂದರು.



