ಹೊಸ ದಿಗಂತ ವರದಿ, ಶಿರಸಿ:
ಕಾಂಗ್ರೆಸ್ ಸರ್ಕಾರದ ಆಡಳಿತ ಜನರಿಗೆ ಅಸಹ್ಯ ಹುಟ್ಟಿಸಿದೆ ಎಂದು ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತೀವ್ರ ವಾಗ್ದಾಳಿ ನಡೆಸಿದರು.
ಶನಿವಾರ ಇಲ್ಲಿಯ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ದರುಶನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ಆಡಳಿತ ಪಕ್ಷದಲ್ಲಿ 140 ಶಾಸಕರಿದ್ದರೂ ಸಹ ಸಮಾಧಾನದಿಂದ ಆಡಳಿತ ಮಾಡಲು ಸಾಧ್ಯವಾಗುತ್ತಿಲ್ಲ. ಜನಾದೇಶವಿದ್ದರೂ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. “ಅಪ್ಪ ಒಂದು ಕಡೆ, ಅಮ್ಮ ಒಂದು ಕಡೆ, ಈ ನಡುವೆ ಕೂಸು ಬಡವಾಯಿತು” ಎಂಬ ದಾಸಯ್ಯನ ಕಥೆಯಂತೆ ರಾಜ್ಯದ ಸ್ಥಿತಿ ಅಷ್ಟೊಂದು ನಿಷ್ಕ್ರೀಯವಾಗಿದೆ ಎಂದರು.

