March 20, 2026
Friday, March 20, 2026
spot_img

ಜೈಲಿಂದ ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿ ರಿಲೀಸ್: ಅಭಿಮಾನಿಗಳಿಂದ ಹೂವಿನ‌ ಹಾರ ಹಾಕಿ ಸ್ವಾಗತ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಬಂಧನವಾಗಿದ್ದ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿಗೆ ಜಾಮೀನು ಮಂಜೂರು ಆಗಿದ್ದು, ಈ ಹಿನ್ನೆಲೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.

ಇದೀಗ ಬಿಡುಗಡೆಯಾಗಿರುವ ವೀರೇಂದ್ರಗೆ ಅಭಿಮಾನಿಗಳು ಪರ ಘೋಷಣೆ ಕೂಗಿ, ಹೂವಿನ‌ ಹಾರ ಹಾಕಿ ಬರಮಾಡಿಕೊಂಡರು.

ಜನಪ್ರತಿನಿಧಿಗಳ ಕೋರ್ಟ್‌ನಿಂದ ಇಂದು ಜಾಮೀನು ಸಿಕ್ಕಿದ ಹಿನ್ನೆಲೆಯಲ್ಲಿ ಸಂಜೆಯಿಂದಲೇ ಅಭಿಮಾನಿಗಳು ಪರಪ್ಪನ ಅಗ್ರಹಾರ ಜೈಲಿನ ದಾರಿಯಲ್ಲಿ ಕಾಯುತ್ತಿದ್ದರು. ಕಾರಿನಲ್ಲಿ ವೀರೇಂದ್ರ ಪಪ್ಪಿ ಬರುತ್ತಿದ್ದಂತೆ ಸುತ್ತುಗಟ್ಟಿದ ಅಭಿಮಾನಿಗಳು ಘೋಷಣೆಗಳನ್ನು ಕೂಗಿ ಜೈಕಾರ ಹಾಕಿದರು. ಕಾರಿನಿಂದ ಇಳಿದ ಶಾಸಕರು ಅಭಿಮಾನಿಗಳಿಗೆ ಶೇಕ್‌ ಹ್ಯಾಂಡ್‌ ಮಾಡಿ ಸಂತಸ ವ್ಯಕ್ತಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !