March 30, 2026
Monday, March 30, 2026
spot_img

ಸುದೀರ್ಘ ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ವಾಪಾಸ್‌ ಬಂದ ಕಾಂಗ್ರೆಸ್‌ ಶಾಸಕರು

ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಪ್ರವಾಸಕ್ಕೆ ತೆರಳಿದ್ದ ಕಾಂಗ್ರೆಸ್‌ ಶಾಸಕರು ಇದೀಗ ಬೆಂಗಳೂರಿಗೆ ವಾಪಾಸ್‌ ಆಗಿದ್ದಾರೆ.

ಸಿರಗುಪ್ಪ ಶಾಸಕ ಬಿಎಂ ನಾಗರಾಜ್‌ ಮಾತನಾಡಿ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಹೋಗಿ ಬಂದೆವು. ಟ್ರಿಪ್‌ನಲ್ಲಿ ಯಾವುದೇ ರಾಜಕೀಯ ಚರ್ಚೆ ಆಗಿಲ್ಲ. ಅಧ್ಯಯನ ಕೂಡ ಮಾಡಿಲ್ಲ. ನಾವು ಹೋಗಿದ್ದ ಫ್ಯಾಮಿಲಿ ಟ್ರಿಪ್‌. ನಮಗ್ಯಾರೂ ಕರೆಯನ್ನೂ ಮಾಡಿಲ್ಲ.

ಜಗಳೂರು ಶಾಸಕ ದೇವೆಂದ್ರಪ್ಪ ಮಾತನಾಡಿ, ಪ್ರವಾಸದ ಜೊತೆಗೆ ಅಧ್ಯಯನಕ್ಕೆ ಹೋಗಿದ್ದೆವು. ಹೈನುಗಾರಿಕೆ, ಕಾನೂನು ಎಲ್ಲದರ ಬಗ್ಗೆ ಅಧ್ಯಯನ ಮಾಡಿದ್ದೇವೆ. ಆ ದೇಶಗಳಲ್ಲಿನ ವ್ಯವಸ್ಥೆ ನಾವು ಅಳವಡಿಸಿಕೊಳ್ಳುವ ಅಗತ್ಯತೆ ಇದೆ. ನಮ್ಮ ಕ್ಷೇತ್ರಗಳಲ್ಲಿ ನಾವು ಅಧ್ಯಯನ ಮಾಡಿಕೊಳ್ಳುತ್ತೇವೆ. ಆಸ್ಟ್ರೇಲಿಯಾಗೆ ಹೋಗಿ ನಾವು ಯಾವ ರಾಜಕೀಯ ಮಾಡೋಕೆ ಆಗುತ್ತೆ? ಇಲ್ಲಿ ಇದ್ರೆನೇ ನಾವು ಯಾವ ರಾಜಕೀಯವೂ ಮಾಡಿಲ್ಲ. ನಮ್ಮ ನಾಯಕರಲ್ಲಿ ಏನೂ ಗೊಂದಲಗಳಿಲ್ಲ. ರಾಜಕೀಯ ಚರ್ಚೆಗೂ ಈ ಪ್ರವಾಸಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !