ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದರು. ಈ ಘಟನೆ ಕುರಿತಂತೆ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇತ್ತ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಕೂಡ ಕಾಂಗ್ರೆಸ್ ನಡೆಯನ್ನು ಟೀಕಿಸಿದ್ದು, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ದೇಶದ್ರೋಹಿಗಳು ಎಂದು ಕರೆದಿದ್ದಾರೆ .
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶ ಎಲ್ಲೆಲ್ಲಿ ಪ್ರಗತಿ ಹೊಂದುತ್ತದೆಯೋ, ಎಲ್ಲೆಲ್ಲಿ ಸಂತೋಷ ಇರುತ್ತದೆಯೋ ಅದನ್ನು ಹಾಳು ಮಾಡಲು ಕಾಂಗ್ರೆಸ್ ಸಿದ್ಧವಿರುತ್ತದೆ ಎಂದು ಕಿಡಿಕಾರಿದರು.
ಇದು ಜಾಗತಿಕ ಎಐ ಇಂಪ್ಯಾಕ್ಟ್ ಶೃಂಗಸಭೆಯಾಗಿತ್ತು. ಬಿಜೆಪಿಯ ಶೃಂಗಸಭೆಯಲ್ಲ ಎನ್ನುವ ಬುದ್ಧಿವಂತಿಕೆ ಕಾಂಗ್ರೆಸ್ಗೆ ಇಲ್ಲ. ಇಡೀ ಪ್ರಪಂಚದಿಂದ ನಾಯಕರು ಇದಕ್ಕೆ ಆಗಮಿಸಿದ್ದರು.ಅವರ ಮುಂದೆ ದೇಶದ ಮರ್ಯಾದಿಯನ್ನು ಕಳೆಯುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ ಟಾಪ್ಲೆಸ್, ಬ್ರೈನ್ಲೆಸ್ ಹಾಗೂ ಶೇಮ್ಲೆಸ್ ಎಂದು ಗುಡುಗಿದ್ದಾರೆ.



