Wednesday, January 14, 2026
Wednesday, January 14, 2026
spot_img

Child Care | ಚಿಕ್ಕ ಮಕ್ಕಳಲ್ಲೂ ಹೆಚ್ಚಾಗುತ್ತಿದೆ ಮಲಬದ್ಧತೆ: ಪೋಷಕರಾಗಿ ಈ ವಿಷ್ಯ ಗೊತ್ತಿರಲೇ ಬೇಕು!

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಎಂಬ ಸಮಸ್ಯೆ ವಯಸ್ಕರಿಗೆ ಮಾತ್ರ ಸೀಮಿತವಾಗಿಲ್ಲ. ಶಿಶುಗಳಿಂದ ಹಿಡಿದು ಶಾಲಾ ಮಕ್ಕಳವರೆಗೂ ಈ ತೊಂದರೆ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ವಿಶೇಷವಾಗಿ ಎರಡು ವರ್ಷ ವಯಸ್ಸಿನ ಮಕ್ಕಳಲ್ಲೂ ಮಲಬದ್ಧತೆ ಕಾಣಿಸಿಕೊಳ್ಳುತ್ತಿರುವುದು ಪೋಷಕರಿಗೆ ಆತಂಕ ಮೂಡಿಸುವ ವಿಷಯವಾಗಿದೆ. ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಬಂದ ಬದಲಾವಣೆಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ.

ಮಕ್ಕಳಲ್ಲಿ ಮಲಬದ್ಧತೆ ಹೆಚ್ಚಾಗಲು ಕಾರಣವೇನು?

ಇಂದಿನ ಮಕ್ಕಳ ಆಹಾರದಲ್ಲಿ ಫೈಬರ್ ಕೊರತೆ ಪ್ರಮುಖ ಸಮಸ್ಯೆಯಾಗಿದೆ. ಜಂಕ್ ಫುಡ್, ಬಿಸ್ಕತ್, ಬ್ರೆಡ್, ರಸ್ಕ್‌ಗಳ ಅತಿಯಾದ ಸೇವನೆ, ತರಕಾರಿ ಮತ್ತು ಹಣ್ಣುಗಳ ಬಳಕೆಯ ಕೊರತೆ ಮಲಬದ್ಧತೆಗೆ ಕಾರಣವಾಗುತ್ತಿದೆ. ಜೊತೆಗೆ ಸಾಕಷ್ಟು ನೀರು ಮತ್ತು ದ್ರವಾಹಾರ ಸೇವಿಸದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತದೆ. ಹಾಲು ಹಾಗೂ ಡೈರಿ ಉತ್ಪನ್ನಗಳ ಅತಿಯಾದ ಸೇವನೆಯೂ ಕೆಲವು ಮಕ್ಕಳಲ್ಲಿ ಮಲಬದ್ಧತೆಯನ್ನು ಉಂಟುಮಾಡಬಹುದು.

ಜಡ ಜೀವನಶೈಲಿಯ ಪರಿಣಾಮ:

ಮನೆಯೊಳಗೆ ಹೆಚ್ಚು ಸಮಯ ಕಳೆಯುವುದು, ಮೊಬೈಲ್ ಮತ್ತು ಟಿವಿಗೆ ಅಂಟಿಕೊಂಡಿರುವುದು, ಹೊರಾಂಗಣ ಆಟಗಳ ಕೊರತೆ ಅಜೀರ್ಣ ಮತ್ತು ಮಲಬದ್ಧತೆಗೆ ದಾರಿ ಮಾಡಿಕೊಡುತ್ತಿದೆ. ನೀರು ಕಡಿಮೆ ಕುಡಿಯುವುದರಿಂದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ:

ಹೊಟ್ಟೆ ನೋವು, ಹಸಿವು ಕಡಿಮೆಯಾಗುವುದು, ಗಟ್ಟಿಯಾದ ಮಲ, ಮಲವಿಸರ್ಜನೆ ವೇಳೆ ನೋವು ಮುಂತಾದ ಲಕ್ಷಣಗಳು ಮಕ್ಕಳಲ್ಲಿ ಸಾಮಾನ್ಯವಾಗುತ್ತಿವೆ ಎಂದು ತಜ್ಞರು ತಿಳಿಸಿದ್ದಾರೆ.

ಪರಿಹಾರ ಏನು?:

ಮಕ್ಕಳ ಆಹಾರದಲ್ಲಿ ಫೈಬರ್ ಭರಿತ ಪದಾರ್ಥಗಳನ್ನು ಹೆಚ್ಚಿಸಿ, ಸಾಕಷ್ಟು ನೀರು ಕುಡಿಯುವ ಅಭ್ಯಾಸ ಬೆಳೆಸಬೇಕು. ದಿನನಿತ್ಯ ದೈಹಿಕ ಚಟುವಟಿಕೆಗೆ ಉತ್ತೇಜನ ನೀಡಬೇಕು. ಈ ಕ್ರಮಗಳ ಬಳಿಕವೂ ಸಮಸ್ಯೆ ಮುಂದುವರೆದರೆ ತಕ್ಷಣ ಮಕ್ಕಳ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ. ದೀರ್ಘಕಾಲದ ಮಲಬದ್ಧತೆ ಮಕ್ಕಳ ಒಟ್ಟಾರೆ ಬೆಳವಣಿಗೆಯ ಮೇಲೂ ಪರಿಣಾಮ ಬೀರುವುದರಿಂದ ಇದನ್ನು ಎಂದಿಗೂ ನಿರ್ಲಕ್ಷಿಸಬಾರದು.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

Most Read

error: Content is protected !!