ಇಂದಿನ ಜೀವನಶೈಲಿಯಲ್ಲಿ ಕಣ್ಣಿನ ದೃಷ್ಟಿ ಸಮಸ್ಯೆ ಸಾಮಾನ್ಯವಾಗಿದೆ. ಓದು, ಕೆಲಸ, ಮೊಬೈಲ್ ಬಳಕೆ ಇವೆಲ್ಲದರ ನಡುವೆ ಕನ್ನಡಕ ಅಥವಾ ಕಾಂಟ್ಯಾಕ್ಟ್ ಲೆನ್ಸ್ ಬಳಕೆ ಅನಿವಾರ್ಯವಾಗುತ್ತದೆ. ಆದರೆ ಹಲವರ ಮನಸ್ಸಿನಲ್ಲಿ ಒಂದು ಪ್ರಶ್ನೆ ಸದಾ ಇರುತ್ತದೆ ಯಾವುದು ಉತ್ತಮ? ಅಂದಕ್ಕಾಗಿ ಲೆನ್ಸ್ ಹಾಕಿಕೊಳ್ಳುವುದೇ? ಅಥವಾ ಆರೋಗ್ಯಕ್ಕಾಗಿ ಕನ್ನಡಕ ಧರಿಸುವುದೇ? ನಿಜವಾಗಿ ನೋಡಿದರೆ, ಎರಡಕ್ಕೂ ತಮ್ಮದೇ ಆದ ಲಾಭ-ನಷ್ಟಗಳಿವೆ.
ಕನ್ನಡಕ ಧರಿಸುವುದು ಸುಲಭ, ಸುರಕ್ಷಿತ ಮತ್ತು ಕಡಿಮೆ ಜಾಗ್ರತೆ ಸಾಕಾಗುವ ಆಯ್ಕೆ. ಕಣ್ಣುಗಳಿಗೆ ನೇರವಾಗಿ ಸ್ಪರ್ಶವಾಗದ ಕಾರಣ ಸೋಂಕಿನ ಭೀತಿ ಕಡಿಮೆ. ದಿನಪೂರ್ತಿ ಧರಿಸಿದರೂ ಕಣ್ಣಿಗೆ ತೊಂದರೆ ಆಗುವುದಿಲ್ಲ. ಜೊತೆಗೆ ಈಗಿನ ಟ್ರೆಂಡಿ ಫ್ರೇಮ್ಗಳು ಮುಖದ ಲುಕ್ಗೂ ಹೊಸ ಸ್ಟೈಲ್ ನೀಡುತ್ತವೆ.
ಇದನ್ನೂ ಓದಿ:
ಇನ್ನೊಂದು ಕಡೆ ಕಾಂಟ್ಯಾಕ್ಟ್ ಲೆನ್ಸ್ ಮುಖವನ್ನು ಸ್ವಾಭಾವಿಕವಾಗಿ ಕಾಣುವಂತೆ ಮಾಡುತ್ತದೆ. ಕನ್ನಡಕದ ತೂಕ ಇಲ್ಲದ ಕಾರಣ ದಿನಪೂರ್ತಿ ಲೈಟ್ ಫೀಲ್ ನೀಡುತ್ತದೆ. ಫೋಟೋ, ಕಾರ್ಯಕ್ರಮ ಅಥವಾ ವಿಶೇಷ ಸಂದರ್ಭಗಳಲ್ಲಿ ಲೆನ್ಸ್ ಹೆಚ್ಚು ಆಕರ್ಷಕವಾಗಿ ಕಾಣಲು ಸಹಾಯ ಮಾಡುತ್ತದೆ. ಆದರೆ ಲೆನ್ಸ್ ಬಳಸುವಾಗ ಸ್ವಚ್ಛತೆ ಮತ್ತು ಜಾಗ್ರತೆ ಅತ್ಯಂತ ಮುಖ್ಯ. ಸರಿಯಾಗಿ ನೋಡಿಕೊಳ್ಳದಿದ್ದರೆ ಕಣ್ಣಿಗೆ ಇನ್ಫೆಕ್ಷನ್ ಆಗುವ ಸಾಧ್ಯತೆ ಇರುತ್ತದೆ.
ಆದ್ದರಿಂದ ಯಾವುದು ಉತ್ತಮ ಎಂಬುದು ನಿಮ್ಮ ಜೀವನಶೈಲಿ ಮತ್ತು ಅಗತ್ಯತೆ ಮೇಲೆ ಅವಲಂಬಿತ. ದಿನನಿತ್ಯದ ಬಳಕೆಗೆ ಕನ್ನಡಕ ಸುರಕ್ಷಿತ ಆಯ್ಕೆ ಆಗಿದ್ದರೆ, ವಿಶೇಷ ಸಂದರ್ಭಗಳಿಗೆ ಲೆನ್ಸ್ ಅಂದವನ್ನು ಹೆಚ್ಚಿಸುವ ಆಯ್ಕೆ ಆಗಬಹುದು. ಮುಖ್ಯವಾದದ್ದು – ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳುವುದು.



