ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿಇಂದು ಅತ್ಯಂತ ಭಾರವಾದ ಸಂವಹನ ಉಪಗ್ರಹ ಹೊತ್ತುಕೊಂಡು ನಭೋ ಮಂಡಲಕ್ಕೆ ಜಿಗಿಯಲು ‘ಬಾಹುಬಲಿ’ ರಾಕೆಟ್ ಲಾಂಚ್ ವೆಹಿಕಲ್ ಮಾರ್ಕ್- 3 (LVM-3) ಸಜ್ಜಾಗಿದೆ.
ಭಾನುವಾರ ಸಂಜೆ 5.26ಕ್ಕೆ ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕ್ಷಣಗಣನೆ ಆರಂಭಿಸಿದೆ.
ಎಲ್ ವಿಎಂ3-ಎಂ5 ರಾಕೆಟ್ ಅತ್ಯಂತ ಭಾರವಾದ ಸಂವಹನ ಉಪಗ್ರಹ ಸಿಎಂಎಸ್-03 ಅನ್ನು ಹೊತ್ತುಕೊಂಡು ನಿಂತಿದ್ದು, ಇದರ ಉಡಾವಣೆ ಮಾಡಲು ಇಸ್ರೋ (ISRO) 24 ಗಂಟೆಗಳ ಕ್ಷಣಗಣನೆಯನ್ನು ಪ್ರಾರಂಭಿಸಿದೆ.
ಸುಮಾರು 4,410 ಕೆ.ಜಿ. ತೂಕದ ಉಪಗ್ರಹವನ್ನು ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ನಲ್ಲಿ ಇರಿಸಲಾಗಿದ್ದು, 4,000 ಕೆ.ಜಿ.ಗಿಂತ ಹೆಚ್ಚು ತೂಕದ ಸಂವಹನ ಉಪಗ್ರಹ ಸಿಎಂಎಸ್-03 ಉಡಾವಣೆಗೆ 24 ಗಂಟೆಗಳ ಕ್ಷಣಗಣನೆಯನ್ನು ಪ್ರಾರಂಭಿಸಲಾಗಿದೆ ಎಂದು ಇಸ್ರೋ ಹೇಳಿದೆ.
ಭಾರತದ ನೆಲದಿಂದ ಉಡಾವಣೆಯಾಗುವ ಅತ್ಯಂತ ಭಾರದ ಉಪಗ್ರಹವೆಂದು ಸುಮಾರು 4,410 ಕೆಜಿ ತೂಕದ ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್ (GTO) ಕರೆಯಲಾಗುತ್ತದೆ. ಅದರ ಹೆವಿಲಿಫ್ಟ್ ಸಾಮರ್ಥ್ಯಕ್ಕಾಗಿ ಬಾಹ್ಯಾಕಾಶ ನೌಕೆಯು ‘ಬಾಹುಬಲಿ’ ಎಂದು ಕರೆಯಲ್ಪಡುವ ಎಲ್ ವಿಎಂ 3-ಎಂ5 ರಾಕೆಟ್‌ನಲ್ಲಿ ಪ್ರಯಾಣ ನಡೆಸಲಿದೆ ಎಂದು ಇಸ್ರೋ ತಿಳಿಸಿದೆ.
ಈಗಾಗಲೇ ಉಡಾವಣಾ ವಾಹನವನ್ನು ಸಂಪೂರ್ಣವಾಗಿ ಜೋಡಿಸಲಾಗಿದ್ದು, ಬಾಹ್ಯಾಕಾಶ ನೌಕೆಯೊಂದಿಗೆ ಸಂಯೋಜಿಸಲಾಗಿದೆ. ಪೂರ್ವ ಉಡಾವಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಎರಡನೇ ಉಡಾವಣಾ ಪ್ಯಾಡ್ ಕೂಡ ಸಿದ್ಧಗೊಂಡಿರುವುದಾಗಿ ಬೆಂಗಳೂರು ಪ್ರಧಾನ ಕಚೇರಿಯ ಬಾಹ್ಯಾಕಾಶ ಸಂಸ್ಥೆ ಶನಿವಾರ ತಿಳಿಸಿದೆ.

                                    