January19, 2026
Monday, January 19, 2026
spot_img

ಅಕ್ರಮ ಸಂಬಂಧ ಕಂಡ ಮಗನನ್ನು ಕೊಂದ ತಾಯಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಾಯಿಯೊಬ್ಬಳುನೆರೆ ಮನೆಯ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನ್ನು ಮಗ ನೋಡಿದ ಎನ್ನುವ ಕಾರಣಕ್ಕೆ ಮಗನನ್ನೇ ಹತ್ಯೆ ಮಾಡಿದ್ದು , ಇದೀಗ ಈ ಪ್ರಕರಣ ಸಂಬಂಧ ಗ್ವಾಲಿಯರ್ ನ್ಯಾಯಾಲಯವು ತಾಯಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ಪ್ರಾಸಿಕ್ಯೂಷನ್ ಮಾಹಿತಿ ಪ್ರಕಾರ, 2023ರ ಏಪ್ರಿಲ್ 28ರಂದು ಪೊಲೀಸ್ ಕಾನ್ಸ್ಟೇಬಲ್ ಧ್ಯಾನ್ ಸಿಂಗ್ ರಾಥೋಡ್ ಅವರ ಪತ್ನಿ ಜ್ಯೋತಿ ರಾಥೋಡ್ ತನ್ನ ನೆರೆ ಮನೆಯ ಉದಯ್ ಇಂಡೋಲಿಯಾ ಜೊತೆ ಅಕ್ರಮ ಸಂಬಂಧ ಹೊಂದಿದ್ದನ್ನು ಜ್ಯೋತಿಯ ಮಗ ಜತಿನ್ ನೋಡಿದ್ದಾನೆ. ಆತ ತಂದೆಗೆ ಈ ಕುರಿತು ಹೇಳಬಹುದೆಂದು ತಿಳಿದು ಭಯದಿಂದ ಮಗನನ್ನು ಕಟ್ಟಡದ ಎರಡನೆ ಅಂತಸ್ತಿನ ಛಾವಣಿಯಿಂದ ಕೆಳಗೆ ಎಸೆದಿದ್ದಳು. 24 ಗಂಟೆಗಳ ಕಾಲ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡಿದ ಬಾಲಕ ಬಳಿಕ ಸಾವನ್ನಪ್ಪಿದ್ದಾನೆ.

ಆರಂಭದಲ್ಲಿ ಈ ಪ್ರಕರಣವನ್ನು ಅಪಘಾತ ಎಂದು ಪರಿಗಣಿಸಲಾಗಿತ್ತು. ಜತಿನ್ ಮೇಲ್ಛಾವಣಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದೇ ಭಾವಿಸಲಾಗಿತ್ತು. ಆದರೆ ಅಪರಾಧ ನಡೆದ ಹದಿನೈದು ದಿನಗಳ ಬಳಿಕ ಜ್ಯೋತಿ ಗಂಡನ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಳು.

ಮಗನ ಸಾವಿನ ಬಳಿಕ ಅನುಮಾನಗೊಂಡಿದ್ದ ಧ್ಯಾನ್, ಜ್ಯೋತಿಯ ಮೇಲೆ ನಿಗಾ ಇರಿಸಿದ್ದರು. ಆಕೆಯ ಮೊಬೈಲ್ ನ ಬಹು ಆಡಿಯೋ ಮತ್ತು ವಿಡಿಯೋ ಸಂಭಾಷಣೆಗಳನ್ನು ಕೇಳಿದ್ದರು. ಮನೆಯಲ್ಲಿ ಅಳವಡಿಸಲಾದ ಸಿಸಿಟಿವಿ ದೃಶ್ಯಗಳನ್ನು ಪರಿಶಿಸಲಿಸಿದ್ದರು. ಸಂಪೂರ್ಣ ದಾಖಲೆಗಳೊಂದಿಗೆ ಧ್ಯಾನ್ ಈ ಕುರಿತು ಪೊಲೀಸರಿಗೆ ದೂರು ನೀಡಿದರು.

ಪ್ರಕರಣಕ್ಕೆ ಸಂಬಂಧಿಸಿ ಜ್ಯೋತಿಯ ಪ್ರೇಮಿಯನ್ನು ಆರೋಪಿ ಎಂದು ಹೆಸರಿಸಲಾಗಿದೆ. ಆದರೆ ಬಳಿಕ ಆತನನ್ನು ಖುಲಾಸೆಗೊಳಿಸಲಾಗಿದೆ.

Must Read