March 22, 2026
Sunday, March 22, 2026
spot_img

ಕ್ರಿಕೆಟಿಗ ರೋಹಿತ್ ಶರ್ಮಾ, ಹರ್ಮನ್‌ಪ್ರೀತ್ ಕೌರ್‌ ಗೆ ಒಲಿದ ಪದ್ಮ ಪ್ರಶಸ್ತಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರಕಾರ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಆ ಪ್ರಕಾರ ಕ್ರೀಡಾ ವಿಭಾಗದಲ್ಲೂ ವಿವಿದ ಸಾಧಕರಿಗೆ ಈ ಗೌರವ ಸಂದಿದೆ.

ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಐಸಿಸಿ ಟ್ರೋಫಿಗೆ ಮುನ್ನಡೆಸಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಪುರುಷರ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಇಬ್ಬರ ಜೊತೆಗೆ ದೇಶದ ಅತ್ಯಂತ ಯಶಸ್ವಿ ಟೆನಿಸ್ ಆಟಗಾರರಲ್ಲಿ ಒಬ್ಬರಾದ ವಿಜಯ್ ಅಮೃತರಾಜ್ ಅವರು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ, ಭಾರತ ತಂಡ ಕಳೆದ ವರ್ಷ 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ಹೀಗೆ ರೋಹಿತ್ ಶರ್ಮಾ ಎರಡು ವರ್ಷಗಳಲ್ಲಿ ಭಾರತ ತಂಡವನ್ನು ಎರಡನೇ ಐಸಿಸಿ ಟ್ರೋಫಿಗೆ ಮುನ್ನಡೆಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು.

ಇತ್ತ ಕಳೆದ ನವೆಂಬರ್‌ನಲ್ಲಿ, ಹರ್ಮನ್‌ಪ್ರೀತ್ ಕೌರ್ ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಹಿಂದೆಂದೂ ಕಾಣದ ಸಾಧನೆ ಮಾಡಿದ್ದರು. ಹರ್ಮನ್‌ಪ್ರೀತ್ ನಾಯಕತ್ವದಲ್ಲಿ ಭಾರತೀಯ ಮಹಿಳಾ ತಂಡವು ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಇದು ಮಹಿಳಾ ಕ್ರಿಕೆಟ್‌ನಲ್ಲಿ ಭಾರತದ ಮೊದಲ ಐಸಿಸಿ ಟ್ರೋಫಿಯಾಗಿದೆ. ಇದೀಗ ಈ ಸಾಧನೆಗಳಿಗಾಗಿ, ಈ ಇಬ್ಬರು ದಿಗ್ಗಜರನ್ನು ಗೌರವಿಸಲಾಗಿದೆ.

ಪದ್ಮ ಪ್ರಶಸ್ತಿಗೆ ಭಾಜನರಾದವರ ಪಟ್ಟಿ
ವಿಜಯ್ ಅಮೃತರಾಜ್ (ಟೆನಿಸ್) – ಪದ್ಮಭೂಷಣ
ರೋಹಿತ್ ಶರ್ಮಾ (ಕ್ರಿಕೆಟ್) – ಪದ್ಮಶ್ರೀ
ಹರ್ಮನ್ಪ್ರೀತ್ ಕೌರ್ (ಕ್ರಿಕೆಟ್) – ಪದ್ಮಶ್ರೀ
ಪ್ರವೀಣ್ ಕುಮಾರ್ (ಪ್ಯಾರಾ-ಅಥ್ಲೆಟಿಕ್ಸ್) – ಪದ್ಮಶ್ರೀ
ಬಲದೇವ್ ಸಿಂಗ್ (ಹಾಕಿ) – ಪದ್ಮಶ್ರೀ
ಭಗವಾನ್‌ದಾಸ್ ರಾಯ್ಕ್ವಾರ್ (ಸಾಂಪ್ರದಾಯಿಕ ಸಮರ ಕಲೆಗಳು) – ಪದ್ಮಶ್ರೀ
ಕೆ.ಪಜನಿವೇಲ್ (ಸಿಲಂಬಂ)- ಪದ್ಮಶ್ರೀ
ಸವಿತಾ ಪುನಿಯಾ (ಹಾಕಿ)- ಪದ್ಮಶ್ರೀ
ವ್ಲಾಡಿಮಿರ್ ಮೆಸ್ಟ್ವಿರಿಶ್ವಿಲಿ (ನಿಧನ) – ಪದ್ಮಶ್ರೀ (ಕುಸ್ತಿ ತರಬೇತುದಾರ)

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !