Thursday, January 1, 2026

ಒಂದೇ ದಿನದಲ್ಲಿ ಕೋಟಿ ಕೋಟಿ ಆದಾಯ: ಹೊಸ ವರ್ಷಕ್ಕೆ ಮೆಟ್ರೋದಲ್ಲಿ ಓಡಾಡಿದ್ದು ಎಷ್ಟು ಜನ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ವರ್ಷದ ಸಂಭ್ರಮಾಚರಣೆಗೆ ನಗರದಲ್ಲಿ ಜನಸಂದಣಿ ಹೆಚ್ಚಿದ್ದ ಹಿನ್ನೆಲೆ ನಮ್ಮ ಮೆಟ್ರೋ ದಾಖಲೆ ಮಟ್ಟದ ಪ್ರಯಾಣಿಕರನ್ನು ಹೊತ್ತು ಸಾಗಿಸಿದೆ. ಒಂದೇ ದಿನದಲ್ಲಿ 8.93 ಲಕ್ಷಕ್ಕೂ ಹೆಚ್ಚು ಜನರು ಮೆಟ್ರೋ ಸೇವೆ ಬಳಸಿದ್ದು, ಇದರಿಂದ 3.08 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.

ಹೊಸ ವರ್ಷದ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಸೇವಾ ಸಮಯವನ್ನು ವಿಶೇಷವಾಗಿ ವಿಸ್ತರಿಸಿತ್ತು. ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳಲ್ಲಿ ಡಿಸೆಂಬರ್ 31ರಂದು ಬೆಳಿಗ್ಗೆ 5 ಗಂಟೆಯಿಂದ ಮಧ್ಯರಾತ್ರಿ 3:10ರವರೆಗೆ ಮೆಟ್ರೋ ರೈಲುಗಳು ಸಂಚರಿಸಿವೆ. ದೀರ್ಘ ಅವಧಿಯ ಸಂಚಾರ ವ್ಯವಸ್ಥೆ ಹೊಸ ವರ್ಷದ ಸಂಭ್ರಮದಲ್ಲಿದ್ದ ನಾಗರಿಕರಿಗೆ ಸುರಕ್ಷಿತ ಹಾಗೂ ಸುಲಭ ಪ್ರಯಾಣಕ್ಕೆ ನೆರವಾಯಿತು.

ವಿಸ್ತರಿತ ಸೇವೆಯ ಪ್ರಯೋಜನವನ್ನು ಸಾವಿರಾರು ಪ್ರಯಾಣಿಕರು ಪಡೆದುಕೊಂಡಿದ್ದು, ನಗರದಲ್ಲಿ ರಸ್ತೆ ಸಂಚಾರದ ಒತ್ತಡವೂ ಕಡಿಮೆಯಾಯಿತು. ಹೊಸ ವರ್ಷಾಚರಣೆಯ ದಿನ ನಮ್ಮ ಮೆಟ್ರೋ ನಗರ ಸಾರಿಗೆ ವ್ಯವಸ್ಥೆಗೆ ಪ್ರಮುಖ ಆಸರೆಯಾಗಿ ಪರಿಣಮಿಸಿದೆ.

error: Content is protected !!