April 13, 2026
Monday, April 13, 2026
spot_img

ವೆನಿಜುವೆಲಾ, ಇರಾನ್‌ ಬಳಿಕ ಅಮೆರಿಕ ಹಿಟ್‌ ಲಿಸ್ಟ್‌ನಲ್ಲಿ ಕ್ಯೂಬಾ: ಈ ಕುರಿತು ಟ್ರಂಪ್ ಶಾಕಿಂಗ್ ಹೇಳಿಕೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಯುದ್ದ್ಧದ ಕಾರ್ಮೋಡ ಹೆಚ್ಚುತ್ತಲ್ಲೇ ಇದ್ದು, ಇದರ ನಡುವೆ ಕ್ಯೂಬಾ ಮೇಲೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಚಿತ್ತ ನೆಟ್ಟಿದ್ದು, ನಾನು ಕ್ಯೂಬಾವನ್ನು ನೋಡಿಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ವೆನಿಜುವೆಲಾ, ಇರಾನ್‌ ಮೇಲೆ ತನ್ನ ಬಲ ಪ್ರಯೋಗ ಮಾಡುತ್ತಿದ್ದು, ಇರಾನ್‌ ಮೇಲಿನ ದಾಳಿಯಿಂದಾಗಿ ಮಧ್ಯಪ್ರಾಚ್ಯವೆಲ್ಲಾ ಯುದ್ದದಲ್ಲಿ ನರಳುತ್ತಿದೆ. ಈ ಮಧ್ಯೆ ಟ್ರಂಪ್‌ ತನ್ನ ಬಹುಕಾಲದಿಂದ ಹಿಟ್ ಲಿಸ್ಟ್‌ ನಲ್ಲಿದ್ದ ಕ್ಯೂಬಾ ಮೇಲೆ ಕಣ್ಣಿಟ್ಟಿದ್ದಾರೆ.

ಈ ಕುರಿತು ಫ್ಲೋರಿಡಾದಲ್ಲಿ ನಡೆದ ಲ್ಯಾಟಿನ್ ಅಮೆರಿಕ ದೇಶಗಳೊಂದಿಗೆ ನಡೆಸಿದ ‌ʼಶೀಲ್ಡ್‌ ಆಫ್‌ ದಿ ಅಮೆರಿಕಾಸ್ʼ ಶೃಂಗಸಭೆಯಲ್ಲಿ ವೆನಿಜುವೆಲಾದಲ್ಲಿ ನಿಕೋಲಸ್‌ ಮಡುರೊ ಸೆರೆಹಿಡಿದು ನಡೆಸಿದ ಕಾರ್ಯಚರಣೆ ಕುರಿತು ಮಾತನಾಡಿದ್ದಾರೆ.

ನಾವು ವೆನೆಜುವೆಲಾದಲ್ಲಿ ಐತಿಹಾಸಿಕ ರೂಪಾಂತರವನ್ನು ಸಾಧಿಸುತ್ತಿದ್ದಂತೆ, ಕ್ಯೂಬಾದಲ್ಲಿ ಶೀಘ್ರದಲ್ಲೇ ಬರಲಿರುವ ದೊಡ್ಡ ಬದಲಾವಣೆಯನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

https://hosadigantha.com/war-looms-in-the-middle-east-trump-approves-sale-of-12000-bombs-from-the-us-to-israel

ಕ್ಯೂಬಾದ ಬಳಿ ತೈಲವಿಲ್ಲ, ಹಣವಿಲ್ಲ ಇದರ ಜೊತೆಗೆ ಅವರ ದೇಶದಲ್ಲಿ ಕೆಟ್ಟ ಆಡಳಿತ ಹಾಗೂ ಕೆಟ್ಟ ತತ್ವಶಾಸ್ತ್ರವಿದೆ. ಹೀಗೆ ಕ್ಯೂಬಾ ತನ್ನ ಜೀವನದ ಕೊನೆಯ ಕ್ಷಣಗಳಲ್ಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

ಸದ್ಯ ನಮ್ಮ ಗಮನ ಇರಾನ್‌ ಮೇಲಿದ್ದು, ಇದರ ನಡುವೆ ಯುಎಸ್‌ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಕೇವಲ ಒಂದು ಗಂಟೆಯ ರಜೆಯನ್ನು ತೆಗೆದುಕೊಂಡು ಈ ಕ್ಯೂಬಾದ ಕಾರ್ಯವನ್ನು ಮುಗಿಸಲಿದ್ದು, ಸುಲಭವಾಗಿ ಅದರ ಎಲ್ಲಾ ಪ್ರದೇಶವನ್ನು ತೆಕ್ಕೆಗೆ ತೆಗೆದುಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲದೆ, ನಾನು ಅದನ್ನು ನೋಡಿಕೊಳ್ಳಲಿದ್ದು, ಅದಕ್ಕೆ ಹೊಸ ಜೀವನ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !