January21, 2026
Wednesday, January 21, 2026
spot_img

ಕಬ್ಬನ್‌ ಪಾರ್ಕ್‌ ಹೂವಿನುತ್ಸವಕ್ಕೆ ತೆರೆ, ಸಂಪೂರ್ಣ ಆದಾಯ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಳೆದ ಹನ್ನೊಂದು ದಿನಗಳಿಂದ ಬೆಂಗಳೂರು ನಗರದ ಕಬ್ಬನ್ ಪಾರ್ಕ್​​ನಲ್ಲಿ ನಡೀತಿದ್ದ ಫ್ಲವರ್ ಶೋ ಇಂದಿಗೆ ಮುಕ್ತಾಯವಾಗಿದೆ.

ನವೆಂಬರ್ 27ರಿಂದ ಡಿಸೆಂಬರ್ 7ರ ವರೆಗೆ ನಡೆದ ಫ್ಲವರ್ ಶೋನಲ್ಲಿ ಬಗೆ ಬಗೆಯ ಹೂವುಗಳಿಂದ‌‌‌ ಕಲಾಕೃತಿಗಳನ್ನು ಹಾಗೂ ವಿವಿಧ ಬಗೆಯ‌ ಗಿಡಗಳ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಜೊತೆಗೆ ಕುರಕಲು ತಿಂಡಗಳೂ ಇದ್ದಿದ್ದು ಬೆಂಗಳೂರು ಜನರ ಪಿಕ್ ನಿಕ್ ಹಾಟ್ ಸ್ಪಾಟ್ ಕಬ್ಬನ್ ಪಾರ್ಕ್​ಗೆ ಮತ್ತಷ್ಟು ಮೆರಗು ತಂದುಕೊಡ್ತು.

ಒಟ್ಟು 11 ದಿನ ನಡೆದ ಫ್ಲವರ್ ಶೋನಲ್ಲಿ ನಾಲ್ಕುವರೆ ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿರೋದಾಗಿ ತೋಟಗಾರಿಕೆ ಇಲಾಖೆ ತಿಳಿಸಿದೆ. ಅಂದಾಜು 50 ಲಕ್ಷ ರೂಪಾಯಿ ಆದಾಯವೂ ಇಲಾಖೆಯ ಖಜಾನೆ ಸೇರಿದೆ.

Must Read