ಮೂರು ವರ್ಷದವರೆಗೂ ಮಕ್ಕಳು ಮುದ್ದು ಅನಿಸ್ತಾರೆ. ಅವರ ಮಾತು, ನಡೆ, ನುಡಿ, ಕೋಪ, ಪ್ರೀತಿ ಎಲ್ಲವೂ ನಮಗೆ ನಗು ತರಿಸುತ್ತದೆ. ಆದರೆ ಮೂರು ವರ್ಷದ ನಂತರ ಮಕ್ಕಳನ್ನು ಶಿಸ್ತಿನೆಡೆಗೆ ತರೋದು ನಮ್ಮದೇ ಡ್ಯೂಟಿ. ಮೂರು ವರ್ಷದ ಮಕ್ಕಳಿಗೆ ಇದೆಲ್ಲ ಗೊತ್ತಿರಬೇಕು..
- ಸ್ವತಂತ್ರವಾಗಿ ಕೆಲವು ಕೆಲಸಗಳನ್ನಾದರೂ ಅವರು ಮಾಡಬೇಕು. ನೀರು ತೆಗೆದುಕೊಂಡು ಕುಡಿಯುವುದು, ಹಣ್ಣಿನ ಸಿಪ್ಪೆ ಸುಲಿಕೊಂಡು ತಿನ್ನುವುದು ಹೀಗೆ..
- ಜವಾಬ್ದಾರಿ ಸ್ವಲ್ಪವಾದರೂ ಬರಬೇಕು, ಸ್ಕೂಲಿನಿಂದ ಬಂದು ಚಪ್ಪಲಿಗಳನ್ನು ಸರಿಯಾಗಿ ಜೋಡಿಸುವುದು, ತಮ್ಮ ವಸ್ತುಗಳನ್ನು ಜೋಪಾನ ಮಾಡಲು ಬರಬೇಕು.
- ಅಕ್ಷರ ಹಾಗೂ ಸಂಖ್ಯೆಗಳನ್ನು ಗುರುತಿಸಬೇಕು. ಶಾಲೆಯಲ್ಲಿ ಕಲಿಯುವುದರ ಜೊತೆ ಬಟ್ಟೆ ಮೇಲಿರುವ ಪ್ರಿಂಟ್‌ನಲ್ಲಿನ ಅಕ್ಷರಗಳು, ಸಂಖ್ಯೆಗಳನ್ನು ಇದ್ದಕ್ಕಿದ್ದಂತೆಯೇ ತೋರಿಸಿದರೂ ಅದನ್ನು ಗುರುತಿಸಬೇಕು.
- ತಮ್ಮ ಆಟಸಾಮಾನುಗಳು ಅಥವಾ ಊಟ ತಿಂಡಿ ಇನ್ನೊಬ್ಬರ ಜೊತೆ ಶೇರ್ ಮಾಡಬೇಕು. ಹಠ ಮಾಡುವ ಬದಲಾಗಿ ಪ್ರೀತಿಯಿಂದ ಕೇಳಿದಾಗ ಸ್ವಲ್ಪ ಶೇರ್ ಮಾಡುವುದನ್ನು ಕಲಿಯಬೇಕು.
- ಎಲ್ಲಿ ಪೊಲೈಟ್ ಆಗಿರಬೇಕು, ಎಲ್ಲಿ ಗಲಾಟೆ ಮಾಡಬಹುದು ಎನ್ನೋದು ಗೊತ್ತಿರಬೇಕು. ಬೇರೆಯವರ ಮನೆಯ ಸೋಫಾ ಮೇಲಿ ಹತ್ತಿ ತುಳಿಯುವುದು, ಕಿರುಚುವುದು ಬಂದ್ ಆಗಬೇಕು.
- ಮಾತು ಹಾಗೂ ಮಾತನಾಡದೆಯೂ ಕಮ್ಯುನಿಕೇಟ್ ಮಾಡಬೇಕು. ಕಣ್ಸನ್ನೆಯಲ್ಲಿ ಹೇಳಿದ್ದೂ ಮಕ್ಕಳಿಗೆ ಅರ್ಥವಾಗಬೇಕು.
- ಅವರ ಇಮ್ಯಾಜಿನೇಷನ್ ಬಳಸೋಕೆ ಗೊತ್ತಾಗಬೇಕು. ತಮ್ಮದೇ ಇಮ್ಯಾಜಿನೇಷನ್ ಬಳಸಿ, ಕಥೆ ಕಟ್ಟೋಕೆ, ಸುಳ್ಳು ಜೋಡಿಸೋಕೆ ಬರಬೇಕು.
- ಸುಸು ಮತ್ತು ಪೋಟಿ ಮಾಡೋಕೆ ಒಬ್ಬರೇ ಹೋಗುವಂತಾಗಬೇಕು. ನಾನು ಹೋಗ್ತೇನೆ ಎಂದು ಹೇಳಿ ಬಾತ್‌ರೂಮ್ ಬಾಗಿಲು ತೆಗೆದು ಕೆಲಸ ಮುಗಿಸಿ ನೀರು ಹಾಕಿ, ತಾವೂ ಕೈಕಾಲು ತೊಳೆದು ಬರುವಷ್ಟು ಬುದ್ಧಿ ಇರಬೇಕು.
- ಸ್ಕೂಲಿಂದ ಬಂದು ಕೈ ತೊಳೆಯುವುದು, ಊಟಕ್ಕೆ ಮುನ್ನ ಕೈ ತೊಳೆಯುವ ಅಭ್ಯಾಸ ಬರಬೇಕು
- ರೊಟೀನ್ ಸೆಟ್ ಆಗಬೇಕು, ಅದರಂತೆಯೇ ನಡೆಯಬೇಕು.
- ತಂದೆ ತಾಯಿ ಹೇಳಿದ ಸಣ್ಣ ಪುಟ್ಟ ಕೆಲಸಗಳನ್ನು ಮಾಡುವಷ್ಟು ಕಲಿತಿರಬೇಕು, ಲೋಟ ತೆಗೆದುಕೊಂಡು ಹೋಗಿ ಸಿಂಕ್‌ನಲ್ಲಿ ಹಾಕುವುದು, ರಿಮೋಟ್ ನೀಡುವುದು, ಪುಸ್ತಕ ಬ್ಯಾಗ್‌ನಲ್ಲಿ ಹಾಕಿಕೊಳ್ಳುವುದು ಹೀಗೆ..

