ಹೊಸದಿಗಂತ ವರದಿ, ಮುಂಡಗೋಡ:
ನೋಬೆಲ್ ಪ್ರಶಸ್ತಿ ಪುರಸ್ಕೃತ, ಟಿಬೇಟಿಯನ್ ಧರ್ಮಗುರು ದಲಾಯಿ ಲಾಮಾರವರ ದರುಶನಕ್ಕೆ ಬೆಂಗಳೂರಿಂದ ಇಂಡೋ ಟಿಬೆಟಿಯನ್ ಪ್ರೆಂಡ್ಸಿಪ್ ಸೊಸೈಯಿಟಿ ಮತ್ತು ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಬೆಂಗಳೂರಿಂದ ಮುಂಡಗೋಡಕ್ಕೆ ಸೈಕಲ್ ಜಾಥಾ ಮೂಲಕ ಬುಧವಾರ ಆಗಮಿಸಿದರು.
ಇವರನ್ನು ಮುಂಡಗೋಡದ ಇಂಡೋ ಟಿಬೇಟಿಯನ್ ಪ್ರೆಂಡ್ಸಿಪ್ ಸೊಸೈಯಿಟಿಯವರು ಜಾತಾದ ನಾಯಕ ನಿವೃತ್ತ ಸೈನಿಕ ರವಿ ಮುನಿಸ್ವಾಮಿ. ಮಾಧವ ಎನ್. ಹೆಗಡೆ. ಡಾ. ಎ. ವಿ. ಶ್ರೀನಿವಾನ್ ರವರನ್ನು ಬರ ಮಾಡಿಕೊಂಡರು.
ಮುಂಡಗೋಡದ ಇಂಡೋ ಟಿಬೇಟಿಯನ್ ಪ್ರೆಂಡ್ಸಿಫ್ ಸೊಸೈಯಿಟಿ ಅಧ್ಯಕ್ಷ ಎಸ್. ಪಕ್ಕೀರಪ್ಪ. ಮಂಜುನಾಥ ಕಲಾಲ. ವಾಸು ದಾವಣಗೇರಿ. ಅಶೋಕ ಗಾಣಗೇರ. ನೂರಬೇಗ್. ಮುಖ್ಯ ಶಿಕ್ಷಕ ಎಸ್. ಡಿ. ಮುಡೆಣ್ಣವರ. ವೈ. ಬಿ. ಲಕ್ಷ್ಮಣ, ಇಂಡೋ ಟಿಬೇಟಿಯನ್ ಪ್ರೆಂಡ್ಸಿಪ್ ಸೊಸೈಯಿಟಿಯ ಪಬ್ಲಿಕ್ ರಿಲೇಷನ್ ಆಫೀಸರ ಜಂಪಾ ಲಾಮಾ ಮತ್ತು ಇತರರು ಉಪಸ್ಥಿತರಿದ್ದರು.

