ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು, ಪುದುಚೇರಿ, ಆಂಧ್ರ ಪ್ರದೇಶದ ಕರಾವಳಿ ತೀರಕ್ಕೆ ದಿತ್ವಾ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈ ವರ್ಷ ಭಾರತದಲ್ಲಿ ಮಳೆ ಭಾರಿ ಅವಾಂತರಗಳನ್ನೇ ಮಾಡಿದೆ. ಹಲವೆಡೆ ಪ್ರವಾಹ, ಭೂಕುಸಿತಗಳು ಸಂಭವಿಸಿದೆ. ಕರ್ನಾಟಕ ಸೇರಿದಂತೆ ದೇಶದ ಬಹುತೇಕ ಎಲ್ಲಾ ಜಲಾಶಗಳು ಭರ್ತಿಯಾಗಿತ್ತು. ಇದೀಗ ಮತ್ತೆ ಜನಜೀವನ ಅಸ್ತವ್ಯಸ್ತಗೊಳಿಸಲು ದಿತ್ವಾ ಚಂಡಮಾರುತ ರೆಡಿಯಾಗಿದೆ. ನವೆಂಬರ್ 30 ರಂದು ತಮಿಳುನಾಡು, ಪುದುಚೇರಿ, ಆಂಧ್ರ ಪ್ರದೇಶದ ಕರಾವಳಿ ತೀರಕ್ಕೆ ದಿತ್ವಾ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ದಿತ್ವಾ ಚಂಡಮಾರುತ ತಮಿಳುನಾಡಿನ ಚೆನ್ನಿಂದ 750 ಕಿಲೋಮೀಟರ್ ದೂರದ ಪುಟ್ಟುವಿಲ್ ಬಳಿ ರೂಪುಗೊಂಡಿದೆ. ಉತ್ತರ ತಮಿಳುನಾಡು ಕರಾವಳಿ ತೀರ ಭಾಗ ಹಾಗೂ ದಕ್ಷಿಣ ಆಂಧ್ರದ ಕರಾವಳಿ ಭಾಗಕ್ಕೆ ಅಪ್ಪಳಿಸಲಿದೆ. ನವೆಂಬರ್ 30ರಿಂದ ದಿತ್ವಾ ಮಳೆ ಅಬ್ಬರ ಆರಂಭಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.
ತಮಿಳುನಾಡು, ಆಂಧ್ರ ಪ್ರದೇಶ ಕರಾವಳಿ ತೀರ ಪ್ರದೇಶಗಳಿಗೆ ಅಪ್ಪಳಿಸುವ ಕಾರಣ ಇದರ ಪರಿಣಾಮ ಬೆಂಗಳೂರು ಕರ್ನಾಟಕದ ಮೇಲೂ ಇರಲಿದೆ. ಈಗಾಗಲೇ ತಮಿಳುನಾಡು ಹಾಗೂ ಆಂದ್ರ ಪ್ರದೇಶದ ಕೆಲೆವೆಡೆ ಮಳೆಯಾಗುತ್ತಿದೆ.ನವೆಂಬರ್ 30 ರಿಂದ ಮಳೆ ಪ್ರಮಾಣ ಹೆಚ್ಚಾಗಲಿದೆ.
ಈ ಹೊಸ ಚಂಡಮಾರುತಕ್ಕೆ ‘ದಿತ್ವಾ ಚಂಡಮಾರುತ’ ಎಂದು ಹೆಸರಿಡಲಾಗುತ್ತದೆ. ಇದರ ಭೂಸ್ಪರ್ಶದ ಸಮಯ ಇನ್ನೂ ಖಚಿತವಾಗಿಲ್ಲ. ಆದರೆ, ಈ ವಾರದ ಅಂತ್ಯದಲ್ಲಿ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಯಲ್ಲಿ ಭಾರೀ ಮಳೆ, ಗಂಟೆಗೆ 80-90 ಕಿ.ಮೀ ವೇಗದ ಗಾಳಿ ಮತ್ತು ಅಲೆಗಳ ಅಬ್ಬರ ಕಂಡುಬರುವ ನಿರೀಕ್ಷೆಯಿದೆ.
ತಮಿಳುನಾಡಿನ ಹಲೆವೆಡೆ ಯೆಲ್ಲೋ ಅಲರ್ಟ್
ದಿತ್ವಾ ಹೆಸರನ್ನು ಯೆಮೆನ್ ದೇಶ ಸಲ್ಲಿಕೆ ಮಾಡಿದೆ. ಪ್ರಮುಖವಾಗಿ ಭಾರತದ ಸಮುದ್ರದ ಉತ್ತರ ಭಾಗದಲ್ಲಿ ರೂಪುಗೊಂಡಿರುವ ಚಂಡಮಾರುತಕ್ಕೆ ಧಿತ್ವಾ ಎಂದು ಹೆಸರಿಡಲಾಗಿದೆ. ಮಿಳುನಾಡಿನ ಚೆನನೈ, ನಾಗಪಟ್ಟಿಣಂ, ತಿರುವಲ್ಲೂರು, ತಂಜಾವೂರು ಸೇರಿದಂತೆ ಹಲವು ಭಾಗದಲ್ಲಿ ನವೆಂಬರ್ 27, 28 ಹಾಗೂ 29 ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.

