Thursday, November 27, 2025

ಮೋಂಥಾ ಚಂಡಮಾರುತ ದುರ್ಬಲ: ಆಂಧ್ರದಲ್ಲಿ ತಗ್ಗಲಿದೆ ಮಳೆಯ ಅಬ್ಬರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತೀಯ ಹವಾಮಾನ ಇಲಾಖೆ ಬುಧವಾರ ಮುಂಜಾನೆ ನೀಡಿದ ಮಾಹಿತಿ ಅನ್ವಯ, ಮೋಂಥಾ ಚಂಡಮಾರುತ ಕರಾವಳಿಯನ್ನು ದಾಟಿದ ನಂತರ ಸಾಮಾನ್ಯ ಚಂಡಮಾರುತವಾಗಿ ದುರ್ಬಲಗೊಂಡಿದೆ. ಇದರಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಬಿರುಗಾಳಿ ಬೀಸಿದೆ.

ಕರಾವಳಿ ಆಂಧ್ರಪ್ರದೇಶದ ಮೇಲಿದ್ದ ಚಂಡಮಾರುತ ವಾಯುವ್ಯ ದಿಕ್ಕಿಗೆ ಗಂಟೆಗೆ 10 ಕಿಲೋಮೀಟರ್ ವೇಗದಲ್ಲಿ ಚಲಿಸಿ, ಚಂಡಮಾರುತವಾಗಿ ದುರ್ಬಲಗೊಂಡಿದೆ, ಎಂದು ಹವಾಮಾನ ಇಲಾಖೆ ತನ್ನ 2:30 ರ ಬೆಳಗಿನ ನವೀಕರಣದಲ್ಲಿ ತಿಳಿಸಿದೆ.

ಹವಾಮಾನ ಇಲಾಖೆಯ ಪ್ರಕಾರ, ಚಂಡಮಾರುತವು ನರಸಪುರದಿಂದ ವಾಯುವ್ಯಕ್ಕೆ ಸುಮಾರು 20 ಕಿಲೋಮೀಟರ್, ಮಚಿಲಿಪಟ್ಟಣದಿಂದ ಈಶಾನ್ಯಕ್ಕೆ 50 ಕಿಲೋಮೀಟರ್ ಮತ್ತು ಕಿದಾಡಾದ ಪಶ್ಚಿಮ-ನೈಋತ್ಯಕ್ಕೆ 90 ಕಿಲೋಮೀಟರ್ ದೂರದಲ್ಲಿ ಕೇಂದ್ರೀಕೃತವಾಗಿತ್ತು. ಮಚಿಲಿಪಟ್ಟಣ ಮತ್ತು ವಿಶಾಖಪಟ್ಟಣಂನಲ್ಲಿರುವ ಡಾಪ್ಲರ್ ರೇಡಾರ್‌ಗಳ ಮೂಲಕ ಇದನ್ನು ನಿರಂತರವಾಗಿ ಟ್ರ್ಯಾಕ್ ಮಾಡಲಾಗುತ್ತಿದೆ.

error: Content is protected !!