Tuesday, December 16, 2025

ಆಟೋಗೆ ಅಳವಡಿಸಿದ್ದ ಸಿಲಿಂಡರ್‌ ಸ್ಫೋಟ: ಸುಟ್ಟು ಕರುಕಲಾದ ಕಾರ್‌ಗಳು

ಹೊಸದಿಗಂತ ವರದಿ ಅಂಕೋಲಾ:

ಆಟೋ ರಿಕ್ಷಾಕ್ಕೆ ಅಳವಡಿಸಿದ ಗ್ಯಾಸ್ ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಂಡು ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಆಟೋರಿಕ್ಷಾ ಸೇರಿದಂತೆ ಎರಡು ಕಾರುಗಳು ಸಂಪೂರ್ಣ ಸುಟ್ಟು ಕರುಕಲಾದ ಘಟನೆ ಕಾರವಾರ ಗ್ರಾಮೀಣ ಠಾಣೆ ವ್ಯಾಪ್ತಿಯ ಅಮದಳ್ಳಿಯಲ್ಲಿ ಸೋಮವಾರ ಮಧ್ಯರಾತ್ರಿ ಸಂಭವಿಸಿದ್ದು ಲಕ್ಷಾಂತರ ರೂಪಾಯಿಗಳ ಹಾನಿಯುಂಟಾಗಿದೆ.

ಅಮದಳ್ಳಿಯ ಸಿಫ್ರೆನ್ ಥಾಮಸ್ ಫರ್ನಾಂಡೀಸ್ ಅವರಿಗೆ ಸೇರಿದ ಬಜಾಜ್ ಮ್ಯಾಕ್ಸಿವೋ ಆಟೋರಿಕ್ಷಾಕ್ಕೆ ಅಳವಡಿಸಿದ್ದ ಗ್ಯಾಸ್ ಸಿಲೆಂಡರ್ ಸ್ಪೋಟಗೊಂಡು ಬೆಂಕಿ ರಿಕ್ಷಾ ಜೊತೆಗೆ ಪಕ್ಕದಲ್ಲಿ ನಿಲ್ಲಿಸಿದ್ದ ಎರಡು ಸ್ವಿಪ್ಟ್ ಡಿಸೈರ್ ಕಾರುಗಳಿಗೂ ವ್ಯಾಪಿಸಿಕೊಂಡಿದ್ದು ಮೂರು ವಾಹನಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ.

ಮನೆಯ ಆವರಣ ಹೋರಭಾಗದಲ್ಲಿ ನಿಲ್ಲಿಸಿಟ್ಟ ವಾಹನಗಳು ಹೊತ್ತಿ ಉರಿಯುತ್ತಿರುವುದು ಗಮನಿಸಿದ ಕೆಲವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದು ಅವರು ಬಂದು ಬೆಂಕಿ ಆರಿಸುವ ಕಾರ್ಯಾಚರಣೆ ನಡೆಸಿದರು.
ಆಟೋ ರಿಕ್ಷಾದ ಗ್ಯಾಸ್ ಸಿಲಿಂಡರ್ ಸ್ಫೋಟದಿಂದಲೇ ಅನಾಹುತ ಸಂಭವಿಸಿದೆ ಎಂಬ ಪ್ರಾಥಮಿಕ ಅಂದಾಜು ಮಾಡಲಾಗಿದ್ದು ಈ ಕುರಿತು ಇನ್ನಷ್ಟು ತನಿಖೆ ನಡೆಯಲಿದೆ.
ಕಾರವಾರ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.

error: Content is protected !!