ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾರಮತಿ ವಿಮಾನ ದರುಂತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿ ಐವರು ಮೃತಪಟ್ಟಿದ್ದಾರೆ.
ಈ ದುರ್ಘಟನೆಯಲ್ಲಿ ಫ್ಲೈಟ್ ಅಟೆಡೆಂಟ್ ಪಿಂಕಿ ಮಾಲಿ ಕೂಡ ಸುಟ್ಟು ಕರಕಲಾಗಿದ್ದಾಳೆ. ಇದಾದ ಬಳಿಕ ವಿಮಾನ ಸಿಬ್ಬಂದಿ ಪಿಂಕಿ ಮಾಲಿ ಮತ್ತು ಆಕೆಯ ತಂದೆ ಶಿವಕುಮಾರ್ ಮಾಲಿ ನಡುವಿನ ಕೊನೆಯ ಫೋನ್ ಸಂಭಾಷಣೆ ಹೊರಬಿದ್ದಿದೆ.
ಬಾರಮತಿಗೆ ವಿಮಾನ ಟೇಕ್ ಆಫ್ ಆಗುವ ಮುನ್ನ ಪಿಂಕಿ ಮಾಲಿ ತನ್ನ ತಂದೆಗೆ ಕರೆ ಮಾಡಿದ್ದಾಳೆ. ಅಪ್ಪಾ, ಇವತ್ತು ಅಜಿತ್ ಪವಾರ್ ಜೊತೆ ಪ್ರಯಾಣ ಮಾಡುತ್ತಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾಳೆ. ಅಜಿತ್ ಪವಾರ್ ಅವರನ್ನು ಬಾರಮತಿಯಲ್ಲಿ ಡ್ರಾಪ್ ಮಾಡಿ ಬಳಿಕ ನಾಂದೇಡ್ ಪ್ರಯಾಣ ಮಾಡುತ್ತೇನೆ. ಹೆಚ್ಚಿನ ವಿಶೇಷಗಳನ್ನು ನಾಳೆ ಹೇಳುತ್ತೇನೆ ಎಂದು ಪಿಂಕಿ ಮಾಲಿ ಕರೆ ಮಾಡಿ ತಿಳಿಸಿದ್ದಾಳೆ. ಆದ್ರೆ ಇದಾದ ಮರುದಿನವೇ ಆಕೆಯ ಮನೆಗೆ ಸಾವಿನ ಸುದ್ದಿ ಬರ ಸಿಡಿಲಿನಂತೆ ತಿಳಿಯಿತು.
ನಾವು ನಾಳೆ ನಿಮ್ಮ ಕೆಲಸದ ನಂತರ ಮಾತನಾಡೋಣ ಎಂದು ಹೇಳಿದೆ. ಆದರೆ ಆ ನಾಳೆ ಎಂದಿಗೂ ಬರುವುದಿಲ್ಲ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಅಜಿತ್ ಪವಾರ್ ಜೊತೆಗಿನ ಪ್ರಯಾಣಕ್ಕೆ ಸಂತಸ ವ್ಯಕ್ತಪಡಿಸಿದ್ದಳು. ಎನ್‌ಸಿಪಿ ಕಾರ್ಯಕರ್ಯತನಾಗಿ ನನಗೂ ಹೆಮ್ಮೆ ಅನಿಸಿತ್ತು. ಮಗಳ ಕರೆಯ ನಿರೀಕ್ಷೆಯಲ್ಲಿದ್ದ ನನಗೆ ಆಘಾತವಾಗಿದೆ. ನನ್ನ ಮಗಳು ಗುರುತೇ ಸಿಗದಂತೆ ಸುಟ್ಟು ಕರಕಲಾಗಿದ್ದಾಳೆ ಎಂದು ಶಿವಕುಮಾರ್ ಕಣ್ಮೀರಿಟ್ಟಿದ್ದಾರೆ.
ನನ್ನ ಪ್ರೀತಿಯ ಮಗಳನ್ನು ಕಳೆದುಕೊಂಡಿದ್ದೇನೆ. ವಿಮಾನಕ್ಕೆ ಏನಾಯಿತೋ ಗೊತ್ತಿಲ್ಲ, ನನಗೆ ತಾಂತ್ರಿಕ ಜ್ಞಾನವಿಲ್ಲ. ನನ್ನ ಮಗಳ ಮೃತದೇಹ ನೀಡಿ.ಅಂತಿಮ ಸಂಸ್ಕಾರ ಮಾಡಲು ಮಗಳ ಮೃತದೇಹವೂ ಗೊತ್ತಾಗದ ಪರಿಸ್ಥಿತಿಯಲ್ಲಿದೆ ಎಂದು ಶಿವಕುಮಾರ್ ಕಣ್ಣೀರಿಟ್ಟಿದ್ದಾರೆ.
ಪಿಂಕಿ ಮಾಲಿ ಮುಂಬೈನ ವರ್ಲಿಯಲ್ಲಿ ನೆಲೆಸಿದ್ದರು. ಕಳೆದ ಐದು ವರ್ಷಗಳಿಂದ ಫ್ಲೈಟ್ ಅಟೆಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಳು. ತನ್ನ ತಮ್ಮನನ್ನು ಪೈಲೆಟ್ ಮಾಡುವ ಕನಸು ಕಂಡಿದ್ದಳು. ತನಗೆ ಪೈಲೆಟ್ ಆಗಲು ಸಾಧ್ಯವಾಗಲಿಲ್ಲ. ಶುಲ್ಕ ಭರಿಸುವ ಶಕ್ತಿ ಇರಲಿಲ್ಲ. ಆದರೆ ತಮ್ಮನನ್ನು ಪೈಲೆಟ್ ಮಾಡುತ್ತೇನೆ ಎಂದು ಆರ್ಥಿಕ ನೆರವು ನೀಡುತ್ತಿದ್ದಳು.



