Monday, December 29, 2025

ದಿನಭವಿಷ್ಯ: ಅವಶ್ಯ ಕಾರ್ಯಕ್ಕೆ ಹೆಚ್ಚಿನ ಗಮನ ಕೊಡಿ, ಈ ದಿನ ತುಂಬಾ ಸಂತೋಷವಾಗಿರುತ್ತೀರ

ಮೇಷ
ಹೊಸ ಸಮಸ್ಯೆ ಎದುರಾಗಲಿದೆ. ಆದರೆ ನಿಮಗೆ ಹೆಚ್ಚು ಹಾನಿ ಒದಗದು. ಜಢವಾಗಿ ಕೂರದೆ ದೈಹಿಕ ಅಭ್ಯಾಸದಲ್ಲಿ ತೊಡಗಿ.
ವೃಷಭ
ಶಾಂತ ಮತ್ತು ದೃಢ ಮನಸ್ಥಿತಿ ಇಂದು ಅಗತ್ಯ. ಅನ್ಯರ ವಿಚಾರದಲ್ಲಿ ಮೂಗು ತೂರಿಸಬೇಡಿ. ಸಣ್ಣ ವಿಷಯಕ್ಕೂ ಹೆಚ್ಚು ಉದ್ವೇಗಗೊಳ್ಳದಿರಿ.
ಮಿಥುನ
ಗುರಿ ತಲುಪಲು ಅಸಾಧ್ಯವಾದರೆ ಹತಾಶೆ ಬೇಡ. ಹಿನ್ನಡೆ ತಾತ್ಕಾಲಿಕ. ಉತ್ತಮ ಅವಕಾಶ ಮುಂದಿನ ದಿನಗಳಲ್ಲಿ ನಿಮಗೆ ಕಾದಿದೆ.
ಕಟಕ
ನಿಮ್ಮ ಸುತ್ತ ನೆಗೆಟಿವ್ ಮಂದಿಯೇ ತುಂಬಿದ್ದಾರೆ. ಅವರ ಪ್ರಭಾವಕ್ಕೆ ಸಿಲುಕದಿರಿ. ಆಶಾವಾದ ಮುಖ್ಯ. ಸಮಸ್ಯೆ ಪರಿಹಾರಕ್ಕೆ ಶ್ರಮಪಡಿ.
ಸಿಂಹ
ವೃತ್ತಿಯಲ್ಲಿ ಅನ್ಯರ ಮಾತ್ಸರ್ಯ ಎದುರಿಸುವಿರಿ. ಅದಕ್ಕೆ ತಿರುಗೇಟು ಕೊಡಲು ಹೋಗದಿರಿ. ನಿಮ್ಮ ಕೆಲಸಕ್ಕೆ ಆತುಕೊಳ್ಳಿ.
ಕನ್ಯಾ
ಬಿಡುವಿರದ ದಿನ. ಬಸವಳಿಕೆ, ಗೊಂದಲ ಕಾಡಬಹುದು. ಆರೋಗ್ಯ ಸಮಸ್ಯೆ. ಬಂಧುವೊಬ್ಬರು ನಿಮ್ಮನ್ನು ದುರುಪಯೋಗ ಮಾಡಿಕೊಂಡಾರು.
ತುಲಾ
ಇತರರ ಬಗ್ಗೆ ಕರುಣೆ ತೋರುವ ನಿಮ್ಮ ಸ್ವಭಾವ ದುರುಪಯೋಗ ಮಾಡಿಕೊಂಡಾರು. ವೃತ್ತಿಯಲ್ಲಿ ಉಂಟಾಗಿದ್ದ ಸಮಸ್ಯೆ ಪರಿಹಾರ.
ವೃಶ್ಚಿಕ
ನಿಮ್ಮ ಮೇಲೆ ಪರಿಣಾಮ ಬೀರುವ ಹಲವಾರು ಬೆಳವಣಿಗೆ ಉಂಟಾದೀತು. ತಕ್ಷಣ ಪ್ರತಿಸ್ಪಂದಿಸಲು ವಿಫಲರಾಗುವಿರಿ.
ಧನು
ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ತೋರಬೇಕು. ಅಂತಹ ಪರಿಸ್ಥಿತಿ ನಿಮಗೆ ಇಂದು ಒದಗಬಹುದು. ನಿಷ್ಕ್ರಿಯರಾಗಿ ಕೂರದಿರಿ. ಸೂಕ್ತ ನೆರವು ಲಭ್ಯ.
ಮಕರ
ಗೊಂದಲದ ದಿನ. ಮುಖ್ಯ ವಿಷಯದಲ್ಲಿ ಹೇಗೆ ವ್ಯವಹರಿಸಬೇಕು ಎಂಬುದು ಅರಿಯದ ಸ್ಥಿತಿ. ಉದ್ವಿಗ್ನತೆ, ಆಶಾಂತಿ ಕಾಡಲಿದೆ.
ಕುಂಭ
ಅವಶ್ಯ ಕಾರ್ಯಕ್ಕೆ ಹೆಚ್ಚಿನ ಗಮನ ಕೊಡಿ. ಬೇರೆ ಕೆಲಸ ಬದಿಗಿರಿಸಿ. ಯುವಕರು ಪ್ರೀತಿಯ ಭಾವದಲ್ಲಿ ಸಿಲುಕುವರು. ಪ್ರತಿಸ್ಪಂದನೆ ದೊರಕದು.
ಮೀನ
ಸಮಸ್ಯೆಯನ್ನು ಹಾಗೇ ಬಿಡಬೇಡಿ. ತಕ್ಷಣ ಪರಿಹರಿಸಲು ಗಮನ ಕೊಡಿ. ಉದ್ವಿಗ್ನತೆ ಮಧ್ಯೆಯೂ ಸಂತೋಷ ಪಡುವ ಕ್ಷಣ ಒದಗಲಿದೆ.

error: Content is protected !!