March 16, 2026
Monday, March 16, 2026
spot_img

ದಿನಭವಿಷ್ಯ: ಆರ್ಥಿಕವಾಗಿ ಲಾಭದಾಯಕ ದಿನ, ಉದ್ದಿಮೆದಾರರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ!

ಮೇಷ
ಗ್ರಹಗತಿ ಒಳಿತನ್ನು ಸೂಚಿಸುತ್ತಿದೆ. ವೃತ್ತಿಯಲ್ಲಿ ಉನ್ನತಿ. ನಿರುದ್ಯೋಗಿಗಳಿಗೆ ಉದ್ಯೋಗವಕಾಶ. ಪ್ರೀತಿ, ಸ್ನೇಹದಲ್ಲಿ ವಿರಸ ಮಾಯ, ಸಮರಸತೆ ಬೆಳೆಯಲಿದೆ.
ವೃಷಭ
ಆರ್ಥಿಕ ಲಾಭ. ಉದ್ಯಮದಲ್ಲಿ ಯಶಸ್ಸು. ವಯಸ್ಸಾದವರು ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ. ಕೌಟುಂಬಿಕ ಸಾಮರಸ್ಯ.
ಮಿಥುನ
ಪ್ರಗತಿಪರ ದಿನ. ದೃಢಚಿತ್ತದಿಂದ ಕೆಲಸ ನಿರ್ವಹಿಸಿ. ಆರ್ಥಿಕ ಸ್ಥಿತಿ ತೃಪ್ತಿಕರ. ದಂಪತಿ ಮಧ್ಯೆ ವಿರಸ ಉಂಟಾದೀತು.
ಕಟಕ
ಸಂತೋಷ ಹೆಚ್ಚಿಸುವ ದಿನ. ಅದೃಷ್ಟ ನಿಮ್ಮ ಜತೆಗಿದೆ. ಕಾಡುತ್ತಿದ್ದ ಸಮಸ್ಯೆ ಪರಿಹಾರ. ಆಪ್ತರ ಜತೆಗಿನ ಭಿನ್ನಮತ ನಿವಾರಣೆ.
ಸಿಂಹ
ಎಲ್ಲರ ಮಾತೂ ಕೇಳುತ್ತಾ ಹೋದರೆ ನಿಮ್ಮ ಮೇಲಿನ ಒತ್ತಡ ಹೆಚ್ಚಲಿದೆ. ನೀವೇ ವಿವೇಕಯುತವಾಗಿ ಯೋಚಿಸಿ. ದಂಪತಿ ಮಧ್ಯೆ ವಾಗ್ವಾದ ಸಂಭವ.
ಕನ್ಯಾ
ಕೆಲವು ದಿನಗಳ ಕಠಿಣ ಶ್ರಮವು ಕೊನೆಗೂ -ಲ ನೀಡಲಿದೆ. ತೃಪ್ತಿ ಅನುಭವಿಸುವಿರಿ. ಸಾಂಸಾರಿಕ ಬಿಕ್ಕಟ್ಟು ಉಂಟಾದೀತು.
ತುಲಾ
ವೃತ್ತಿ ಮತ್ತು ಖಾಸಗಿ ಬದುಕಿನ ಮಧ್ಯೆ ಹೊಂದಾಣಿಕೆಯ ಕೊರತೆ. ಎರಡನ್ನೂ ಸಮಾನವಾಗಿ ನಿಭಾಯಿಸಿ. ಯಾವುದನ್ನೂ ಕಡೆಗಣಿಸಬೇಡಿ.
ವೃಶ್ಚಿಕ
ಎಂದಿಗಿಂತ ಹೆಚ್ಚೇ ಕೆಲಸದ ಒತ್ತಡ. ಸಹಚರರ ಜತೆ ಸಂಘರ್ಷ. ಹಣಕ್ಕೆ ಸಂಬಂಽಸಿ ಪ್ರಮುಖ ನಿರ್ಧಾರ ತಾಳದಿರಿ. ಕಾದು ನೋಡುವುದೊಳಿತು.
ಧನು
ವೃತ್ತಿಯಲ್ಲಿ ಎಲ್ಲವೂ ಉತ್ತಮವಾಗಿ ಸಾಗಲಿದೆ. ಆದರೆ ಕೌಟುಂಬಿಕ ಬದುಕಲ್ಲಿ ಏರುಪೇರು ಎದುರಿಸುವಿರಿ. ಅತಿರೇಕ ವಾಗಿ ವರ್ತಿಸದಿರಿ.
ಮಕರ
ನಿರಾಳ ದಿನ. ಮುಖ್ಯ ಕೆಲಸವನ್ನು ಬಹುತೇಕ ನೆರವೇರಿಸಿದ ಸಮಾಧಾನ. ಉದ್ಯಮದಲ್ಲಿ ಪ್ರಗತಿ. ಆರೋಗ್ಯ ಸುಸ್ಥಿರ. ಬಂಧುಮಿತ್ರರ ಸಹಕಾರ.
ಕುಂಭ
ನೀವು ನಿರೀಕ್ಷಿಸಿದ ರೀತಿಯಲ್ಲಿ ದಿನ ಸಾಗದು. ಬಯಸದ ಬೆಳವಣಿಗೆ ಉಂಟಾದೀತು. ನಿಮ್ಮ ಮನಸ್ಸು ಕೆಡಿಸುವ ವ್ಯಕ್ತಿಗಳನ್ನು ದೂರವಿಡಿ.
ಮೀನ
ಸಂಬಂಧದಲ್ಲಿ ಪ್ರಾಮಾಣಿಕವಾಗಿ ವರ್ತಿಸಿ. ಬೇಕಾಬಿಟ್ಟಿ ಧೋರಣೆ ಪ್ರತಿಕೂಲ ಪರಿಣಾಮ ಉಂಟು ಮಾಡೀತು. ಹೊಂದಾಣಿಕೆ ಮುಖ್ಯ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !