February 24, 2026
Tuesday, February 24, 2026
spot_img

ದಿನಭವಿಷ್ಯ: ಅನಾರೋಗ್ಯ ನಿರ್ಲಕ್ಷ್ಯ, ತಾಯಿಯ ಆಸ್ತಿ, ಸ್ತ್ರೀಯರಿಂದ ಮುಜುಗರ ಆಗ್ಬಹುದು ಎಚ್ಚರ!

ಮೇಷ.
 ವೃತ್ತಿಯಲ್ಲಿ ಎಲ್ಲ ಸುಸೂತ್ರ. ಮೇಲಿನವರ  ಪ್ರಶಂಸೆ. ಕೆಲ ವಿಷಯದಲ್ಲಿ ಅತೃಪ್ತಿ ಇದ್ದರೂ ಇಂದು ಖುಷಿಯಿಂದ ಕಳೆಯಿರಿ. ದೂರದ ಬಂದು ಭೇಟಿ.
ವೃಷಭ
ಯಾವುದೋ ವಿಚಾರ ಆತಂಕ ಸೃಷ್ಟಿಸಲಿದೆ. ಅದನ್ನು ಹೋಗಲಾಡಿಸಲು ಪ್ರಯತ್ನ ಪಡಿ. ನಿಮ್ಮನ್ನು ಪೂರ್ಣವಾಗಿ ಅರಿತವರ ನೆರವು ಪಡಕೊಳ್ಳಿರಿ.    
ಮಿಥುನ
ಅಸೂಯೆ ಮನಸ್ಸಿನ ನೆಮ್ಮದಿ ಕೆಡಿಸಬಲ್ಲುದು.  ಅನ್ಯರ ಏಳಿಗೆಗೆ ಮತ್ಸರ ಪಡಬೇಡಿ. ಮನಸ್ಸು ಕೆಡಿಸುವ ಯೋಚನೆ ಮಾಡಲು ಹೋಗಬೇಡಿ.  
ಕಟಕ
ವೃತ್ತಿಯಲ್ಲಿ ಕೆಲವು ಅನುಚಿತ ಬೆಳವಣಿಗೆ ಸಂಭವ.  ಆರೋಗ್ಯದ ಬಗ್ಗೆ ಗಮನ ಕೊಡಿ. ಅತಿಯಾಗಿ ಸಿಹಿ ಪದಾರ್ಥ ಸೇವಿಸದಿರಿ.  
ಸಿಂಹ
ಒತ್ತಡದ ದಿನ. ಬಯಸಿದ ಕಾರ್ಯ ಕೈತಪ್ಪಿ ಹೋದೀತು. ಸಂಬಂಧದಲ್ಲಿ ಋಣಾತ್ಮಕ ಚಿಂತನೆ ನುಸುಳಬಹುದು. ಧ್ಯಾನ ಸಹಕಾರಿ.
ಕನ್ಯಾ
ಸಣ್ಣದೆಂದು ಭಾವಿಸಿದ ಸಮಸ್ಯೆ ದೊಡ್ಡದಾಗಿ ಕಾಡೀತು. ಅದಕ್ಕೆ ಅವಕಾಶ ಕೊಡದಿರಿ. ಆತ್ಮೀಯರ ವಿರೋಧ ಕಟ್ಟಿಕೊಳ್ಳದಿರಿ.  
ತುಲಾ
ಸಂವಹನ ಕಲೆ ನಿಮಗೆ ಕರಗತ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಯಾವುದೇ ಪರಿಸ್ಥಿತಿ ನಿಭಾಯಿಸಲು ಶಕ್ತರಾಗುವಿರಿ.        
ವೃಶ್ಚಿಕ
ನಿಮ್ಮ ಬದುಕಿನ ಮೇಲೆ ತಕ್ಷಣ ಪರಿಣಾಮ ಬೀರಬಲ್ಲ ವಿಷಯದತ್ತ ಹೆಚ್ಚು ಗಮನ ಹರಿಸಿ. ಬೇರೆಲ್ಲ ವಿಚಾರ ಬದಿಗೆ ಸರಿಸಿ. ದೃಢ ನಿಲುವಿರಲಿ.    
ಧನು
ನೀವು ಉದ್ದೇಶಿಸಿದ ಕಾರ್ಯ ಇಂದು ಸಾಧ್ಯ ಆಗದಿರಬಹುದು. ಹತಾಶೆ ಬೇಡ, ನಾಳೆಯೆಂಬುದು ಇದ್ದೇ ಇದೆ. ಮರಳಿ ಪ್ರಯತ್ನವ ಮಾಡಿರಿ.  
ಮಕರ
ವಿವಾದದಿಂದ ದೂರವಿರಿ. ನೀವು ಬಯಸದಿದ್ದರೂ ಕೆಲವರು ತಮ್ಮ ಬಿಕ್ಕಟ್ಟಿನಲ್ಲಿ ನಿಮ್ಮನ್ನು ಎಳೆಯಬಹುದು. ಮಾನಸಿಕ ಒತ್ತಡ ಹೆಚ್ಚು.
ಕುಂಭ
ಶುಭಪ್ರದ ಸಂಕೇತ ಇಂದು ತೋರಿ ಬರಲಿದೆ. ಸದ್ಯದಲ್ಲೆ ನಿಮ್ಮ ಮುಖ್ಯ ಚಿಂತೆಯೊಂದು ಪರಿಹಾರ ಕಾಣಲಿದೆ. ಪೂರಕ ಸನ್ನಿವೇಶ ಸೃಷ್ಟಿ.  
 ಮೀನ
ಯಾವುದೇ ಕೊರತೆ ಇಂದು ಬಾಽಸದು.ನೀವು ಇಚ್ಛಿಸಿದಂತೆ ಆಗಲಿದೆ. ಆದರೂ ನಿಮ್ಮಲ್ಲಿ  ಅಸಂತೃಪ್ತಿ. ಹೇಳಲಾಗದ ಬೇಸರ ಕಾಡುವುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !