March 26, 2026
Thursday, March 26, 2026
spot_img

ದಿನಭವಿಷ್ಯ: ಬೇರೆಯವರ ಬಗ್ಗೆ ದೂರುತ್ತಾ ಇರಬೇಡಿ, ಶಾಪಿಂಗ್‌ನಲ್ಲಿ ಹೆಚ್ಚು ಖರ್ಚಾಗುತ್ತೆ ಇವತ್ತು

ಮೇಷ
ವಿಶ್ವಾಸ ವೃದ್ಧಿ. ಬಾಕಿ ಇರುವ ಕೆಲಸ ಪೂರ್ಣ. ಹಣದ ವಿಚಾರದಲ್ಲಿ ನೀಡುವ ಹಿತವಚನಕ್ಕೆ ಕಿವಿಗೊಡಿ. ಸಾಂಸಾರಿಕ ಸಾಮರಸ್ಯ ಹೆಚ್ಚಳ.
ವೃಷಭ
ಮಹತ್ವದ ಹೊಣೆ ನಿಮ್ಮ ಮೇಲೆ ಬೀಳಲಿದೆ. ತಪ್ಪಾಗದಂತೆ ಎಚ್ಚರ ವಹಿಸಿ. ಶಾಪಿಂಗ್‌ನಲ್ಲಿ ಹೆಚ್ಚು ಕಾಲ ಕಳೆಯದಿರಿ. ಅನವಶ್ಯ ವೆಚ್ಚ ಹೆಚ್ಚಳ.
ಮಿಥುನ
ದಿನದಂತ್ಯಕ್ಕೆ ಅನಿರೀಕ್ಷಿತ ಬೆಳವಣಿಗೆ ನಿರೀಕ್ಷಿಸುವಿರಿ. ಹಣದ ಬೆಂಬತ್ತಬೇಡಿ. ಮಾನಸಿಕ ಒತ್ತಡ ಕಡಿಮೆ ಮಾಡಲು ಗಮನ ಕೊಡಿ.
ಕಟಕ
ಹಣದ ವಿಚಾರ ಚಿಂತೆ ಕಾರಣವಾಗಲಿದೆ. ವೃತ್ತಿಯಲ್ಲಿ ಕಿರಿಕಿರಿ. ಹಿರಿಯರ ಬೇಡಿಕೆ ಅರಿತು ವ್ಯವಹರಿಸಿ. ಆರೋಗ್ಯ ಸುಸ್ಥಿರ, ಚಿಂತೆ ನಿವಾರಣೆ.
ಸಿಂಹ
ಬದುಕು ನೀವು ಬಯಸದ ಕಡೆ ಸಾಗುತ್ತಿದೆ. ಅದರ ಮೇಲೆ ನಿಯಂತ್ರಣ ಸಾಧಿಸಿ. ಇತರರ ಏಳಿಗೆಗೆ ಶ್ರಮಿಸುವ ಮುನ್ನ ನಿಮ್ಮ ಬೇಡಿಕೆಗೆ ಗಮನ ಕೊಡಿ.
ಕನ್ಯಾ
ವೃತ್ತಿ ಒತ್ತಡ ಅಧಿಕ. ಆದರೆ ಅಪರಾಹ್ನದ ವೇಳೆ ಒತ್ತಡ ನಿವಾರಣೆ. ಪ್ರೀತಿಯ ವಿಚಾರದಲ್ಲಿ ಪೂರಕ ಪರಿಸ್ಥಿತಿ. ಖರ್ಚು ನಿಯಂತ್ರಿಸಲು ಯತ್ನಿಸಿ.
ತುಲಾ
ನಿಮ್ಮ ಕರ್ತವ್ಯ ಪಾಲನೆಗೆ ಗಮನ ಕೊಡಿ. ಇತರ ವಿಷಯ ದೂರುತ್ತಾ ಕೂರಬೇಡಿ. ಸಮಸ್ಯೆ ತರುವ ವ್ಯಕ್ತಿಗಳನ್ನು ದೂರ ಇಡಿ. ಆರ್ಥಿಕ ಉನ್ನತಿ.
ವೃಶ್ಚಿಕ
ಶುಭ ಬೆಳವಣಿಗೆ. ಉದ್ಯೋಗವಕಾಶ ಹೆಚ್ಚಳ. ಸ್ವಂತ ಉದ್ದಿಮೆದಾರರಿಗೆ ಯಶಸ್ಸು. ಬಂಧು ಭೇಟಿ. ದೈಹಿಕ ಅಸೌಖ್ಯ ತುಸು ಕಾಡಬಹುದು.
ಧನು
ಇಂದು ಕೆಲವಾರು ಬೆಳವಣಿಗೆ ಉಂಟಾದೀತು. ಹಳೆಯ ವಿಷಯ ಕೆದಕಬೇಡಿ. ಸಮಸ್ಯೆ ಹೆಚ್ಚಬಹುದು. ಕಿರಿಕಿರಿ ವ್ಯಕ್ತಿಗಳಿಂದ ದೂರವಿರಿ.
ಮಕರ
ಪಾಲುದಾರರ ಜತೆ ಸಂಘರ್ಷ ಉಂಟಾದೀತು. ಅರಿತು ವ್ಯವಹರಿಸಿ. ಅನೂಹ್ಯ ಪ್ರಸಂಗ ಎದುರಿಸಬೇಕಾದೀತು. ಆರೋಗ್ಯ ಸಮಸ್ಯೆ.
ಕುಂಭ
ಹೊಸ ಪ್ರಯೋಗ ಮಾಡಲು ಹೋಗಬೇಡಿ. ಇರುವ ಸ್ಥಿತಿಯನ್ನೆ ಮುಂದುವರಿಸಿ. ದೇಹಾರೋಗ್ಯ ಕಾಯಲು ಆದ್ಯತೆ ಕೊಡಿ.
ಮೀನ
ಕಹಿಸಿಹಿ ಬೆಳವಣಿಗೆ ಎರಡೂ ಸಂಭವ. ಕಚೇರಿ ರಾಜಕೀಯ ನೆಮ್ಮದಿ ಕೆಡಿಸುವುದು. ವೆಚ್ಚ ತುಂಬಾ ಹೆಚ್ಚಲಿದೆ. ಹಳೆ ಸ್ನೇಹಿತರ ಸಂಪರ್ಕ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !